ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆ : ನಾಲ್ವರ ಬಂಧನ

ಬೆಂಗಳೂರು,ಅಕ್ಟೋಬರ್,10,2020(www.justkannada.in) : ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆಯಲ್ಲಿ ತೊಡಗಿದ್ದ ಛೋಟಾ ತೆಲಗಿ ಸೇರಿದಂತೆ ನಾಲ್ವರನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಸುಮಾರು 443 ನಕಲಿ ಛಾಪಾ ಕಾಗದ ಜಪ್ತಿ ಮಾಡಲಾಗಿದೆ.

Fake-Chhapka-paper-racket-Bangalore-Four-arrested 

ಹುಸೇನ್ ಬಾಬು ಅಲಿಯಾಸ್ ಛೋಟಾ ತೆಲಗಿ, ಸಿಟಿ ಸಿವಿಲ್ ಕೋರ್ಟ್ ಬಳಿ ಟೈಪ್ ರೈಟರ್ ಆಗಿದ್ದ ಹರೀಶ್, ಶವರ್ ಅಲಿಯಾಸ್ ಸೀಮಾ, ಕಂದಾಯ ಭವನ ಟೈಪಿಸ್ಟ್ ನಜ್ಮಾ ಫಾತಿಮಾ ಬಂಧಿತ ಆರೋಪಿಗಳಾಗಿದ್ದಾರೆ.

ಕೋರ್ಟ್ ಗಳಲ್ಲಿ ಸುಳ್ಳು ದಾಖಲೆಗಳಿಗಾಗಿ ನಕಲಿ ಛಾಪಾ ಕಾಗದ ಸೃಷ್ಟಿ ಮಾಡುತ್ತಿದ್ದ ಇವರಿಗೆ ಸಿಟಿ ಸಿವಿಲ್ ಕೋರ್ಟ್ ಹಾಗೂ ಕಂದಾಯ ಭವನಕ್ಕೆ ಬರುವವರೇ ಟಾರ್ಗೆಟ್ ಆಗಿದ್ದರು ಎಂದು ತಿಳಿದು ಬಂದಿದೆ.

ಹುಸೇನ್ ಅಲಿಯಾಸ್ ಛೋಟಾ ತೆಲಗಿಯನ್ನು ಈ ಹಿಂದೆ ಹಲಸೂರು ಗೇಟ್ ಬಳಿ ಪೊಲೀಸರು ಬಂಧಿಸಿದ್ದರಲ್ಲದೇ ಇದೇ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತ ಮತ್ತೆ ದಂಧೆಯಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

key words : Fake-Chhapka-paper-racket-Bangalore-Four-arrested