ಕೊರೋನಾಗೆ ಹಿರಿಯ ಪತ್ರಕರ್ತ ಬಲಿ…

Promotion

ಹಾಸನ,ಮೇ,17,2021(www.justkannada.in): ಹಾಸನ ಜಿಲ್ಲೆಯ ಹಿರಿಯ ಪತ್ರಕರ್ತ ಸ್ವಾಮಿಗೌಡ ಎಂಬುವವರು ಕೊರೊನಾಗೆ ಬಲಿಯಾಗಿದ್ದಾರೆ.jk

ಚನ್ನರಾಯಪಟ್ಟಣದ ತಾಲ್ಲೂಕಿನ ಹಿರಿಯ ಪತ್ರಕರ್ತ‌ ಸ್ವಾಮಿಗೌಡ ಕೊರೋನಾ ಸೋಂಕು ತಗುಲಿತ್ತು.  ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಮೇ.6 ರಂದು ಚನ್ನರಾಯಪಟ್ಟಣದಿಂದ ಹಾಸನದ ಹಿಮ್ಸ್ ಗೆ ಶಿಪ್ಟ್ ಮಾಡಲಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪತ್ರಕರ್ತ ಸ್ವಾಮಿಗೌಡ ಅವರಿಗೆ ಆಕ್ಸಿಜನ್ ಅಳವಡಿಸಲಾಗಿತ್ತು.hassan-corona-senior-journalist-death

ಆದರೆ ಚಿಕಿತ್ಸೆ ಫಲಿಸದೆ ಇಂದು‌ ಹಾಸನದ ಹಿಮ್ಸ್ ನಲ್ಲಿ ಪತ್ರಕರ್ತ ಸ್ವಾಮಿಗೌಡ ಕೊನೆಯುಸಿರೆಳೆದಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸ್ವಾಮಿಗೌಡ ಕಾರ್ಯ ನಿರ್ವಹಿಸಿದ್ದರು.

Key words: Hassan- Corona- senior journalist -death