ಆಕ್ಸಿಜನ್ ಉಚಿತವಾಗಿ ಬೇಕೆ..? ಹಾಗಿದ್ರೆ ಮೈಸೂರಿನ ‘ವೀ ಕೇರ್’ ನ ಈ ನಂಬರ್ ಗೆ ಕರೆ ಮಾಡಿ…. ..

ಮೈಸೂರು,ಮೇ,17,2021(www.justkannada.in): ಕೊರೊನಾ ಎರಡನೇ ಅಲೆ ವೇಳೆ ಪ್ರಾಣವಾಯು ಸಿಗದೆ ಸಾಕಷ್ಟು ಮಂದಿ ಉಸಿರು ಚೆಲ್ಲುತ್ತಿದ್ದಾರೆ. ಹೋಂ ಐಸೋಲೇಶನ್ ಇರುವ ರೋಗಿಗಳು ಆಸ್ಪತ್ರೆ ಸೇರುವವರೆಗೆ ಕೃತಕ ಉಸಿರಾಟದ ಅವಶ್ಯಕತೆ ಇರುತ್ತದೆ. ಇಂಥಹ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳ ಉಚಿತ ಪೂರೈಕೆಗೆ ಯಶ್ ಟೆಲ್ ಸಂಸ್ಥೆ ಮುಂದಾಗಿದೆ.jk

ವೀ ಕೇರ್ ಮೈಸೂರು ಎಂಬ ಹೆಸರಿನಡಿ ಕೇರ್ ಸೋಷಿಯಲ್ ಫೌಂಡೇಶನ್ ಜೊತೆಗೂಡಿ ಕೊರೊನಾ ರೋಗಿಗಳ ಮನೆಗೆ ಉಚಿತವಾಗಿ ಆಕ್ಸಿಜನ್ ಪೂರೈಸಲು ಮುಂದಾಗಿದೆ. ಆಕ್ಸಿಜನ್ ಅಗತ್ಯವಿರುವ ರೋಗಿಗಳು 9845759434, 9008720156, 9620984019 , 9945392317, 9845704515 ಸಂಖ್ಯೆಗೆ ಕರೆ ಮಾಡಿ ಸೌಲಭ್ಯವನ್ನು ಪಡೆಯಬಹುದಾಗಿದೆ.mysore-yashtel-free-oxygen-supply-covid

ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಯಶ್ಟೆಲ್ ಕಚೇರಿಯ ಮುಂಭಾಗ ಉಚಿತ ಕಾನ್ಸನ್ ಟ್ರೇಟರ್ ಸೇವಾ ಸೌಲಭ್ಯಕ್ಕೆ ಶಾಸಕ ಎಲ್. ನಾಗೇಂದ್ರ ಹಾಗೂ  ಡಿಸಿಪಿ ಡಾ. ಎ.ಎನ್ ಪ್ರಕಾಶ್ ಗೌಡ ಚಾಲನೆ ನೀಡಿದರು. ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಡಾ. ಸಂತೃಪ್ತ್, ಕೆ.ಆರ್. ಆಸ್ಪತ್ರೆಯ ಡಾ. ಯೋಗೀಶ್  ಹಾಗೂ ಯಶ್ಟೆಲ್ ಸಂಸ್ಥೆಯ ಮಾಲೀಕರಾದ ಕೆ.ಎಂ. ಮಂಜುನಾಥ್ ಭಾಗಿಯಾಗಿದ್ದರು.

Key words: mysore-Yashtel-free -oxygen –supply-covid