ಕೋವಿಡ್ ಚಿಕಿತ್ಸೆಗೆ ನೆರವು: ಕೆಎಸ್ ಒಯು ಎಲ್ಲಾ ನೌಕರರ ಒಂದು ದಿನದ ವೇತನ ಕಡಿತಕ್ಕೆ ತೀರ್ಮಾನ…

ಮೈಸೂರು,ಮೇ,17,2021(www.justkannada.in):  ಕೊರೋನಾ 2ನೇ ಅಲೆ ತಡೆಗಟ್ಟುವ ಹಿನ್ನೆಲೆ ಕೊರೋನಾ ವೈರಸ್ ನಿಂದ ಬಳಲುತ್ತಿರುವ  ತನ್ನ ಕೆಲವು ನೌಕರರ ಚಿಕಿತ್ಸೆಗೆ ನೆರವು ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಂದಾಗಿದ್ದು, ಎಲ್ಲಾ ನೌಕರರ ಒಂದು ದಿನದ ವೇತನ ಕಡಿತಕ್ಕೆ ತೀರ್ಮಾನಿಸಿದೆ.jk

ಇಂದು ನಡೆದ  ಶಾಸನಬದ್ಧ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಕರಾಮುವಿ ಕುಲಸಚಿವರು, “ರಾಜ್ಯಾದಾದ್ಯಂತ ಹರಡುತ್ತಿರುವ ಕೋವಿಡ್ 19 (ಕೋರೋನಾ ವೈರಸ್) ವೈರಾಣುವಿನ ಎರಡನೇ ಅಲೆ ತಡೆಗಟ್ಟುವ ಹಿನ್ನೆಲೆಯಲ್ಲಿ, ಹಾಗೂ ಕರಾಮುವಿಯ ಕೆಲವು ನೌಕರರು ಕೋವಿಡ್-19 ಕೊರೋನಾ ವೈರಸ್ ನಿಂದ ಬಳಲುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆಯಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದ ಕಾರಣದಿಂದಾಗಿ -Oxygen Concentrators, Oxygen Mask” ಹಾಗೂ ಇನ್ನಿತರೆ ಸಾಮಾಗ್ರಿಗಳನ್ನು ಖರೀದಿಸಿ,  ವಿತರಿಸುವ ಸಂಬಂಧ ಕರಾಮುವಿಯ ಎಲ್ಲಾ ನೌಕರರ ಮೇ 2021ರ ತಿಂಗಳ  ವೇತನದಲ್ಲಿ ಒಂದು ದಿನದ ವೇತನವನ್ನು ಕಡಿತಗೊಳಸಲು ತೀರ್ಮಾನಿಸಲಾಯಿತು.”covid-treatment-decision-one-day-salary-cut-ksou-all-employees

ಈ ಸಂಬಂಧ  ಕುಲಪತಿಗಳ ಅಧ್ಯಕ್ಷತೆಯಲ್ಲಿ ಇಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 10 Oxygen Concentrators ಹಸ್ತಾಂತರಿಸಿ ಮಂಡಕಳ್ಳಿಯಲ್ಲಿರುವ ಕರಾಮುವಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಸಾರ್ವಜನಿಕರು ಕರಾಮುವಿ ನೌಕರರ ಅನುಕೂಲಕ್ಕಾಗಿ ಸದರಿ ಸಾಮಾಗ್ರಿಗಳನ್ನ ಅಳವಡಿಸಲಾಗುವುದು ಎಂದು ಕುಲಸಚಿವರು ತಿಳಿಸಿದ್ದಾರೆ.

Key words: covid –treatment-Decision -one-day – Salary-cut –KSOU-all employees