ಹರಿಯಾಣ ಚುನಾವಣಾ ಫಲಿತಾಂಶ: ಯಾರು ಸಿಎಂ ಸ್ಥಾನ ಕೊಡ್ತಾರೋ ಅವರ ಜತೆ ಕೈ ಜೋಡಿಸಲು ಸಿದ್ಧ ಎಂದ ಜೆಜೆಪಿ ಪಕ್ಷದ ನಾಯಕ ದುಷ್ಯಂತ್ ಚೌಟಲ…

ಹರಿಯಾಣ,ಅ,24,2019(www.juskannada.in):  ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಹೋರಾಟ ನಡೆಸುತ್ತಿದೆ.

90 ವಿಧಾನಸಭೆ ಕ್ಷೇತ್ರಗಳಿರುವ ಹರಿಯಾಣದಲ್ಲಿ ಅಧಿಕಾರಕ್ಕೇರಲು ಮ್ಯಾಜಿಕ್ ನಂಬರ್ 46 ಬೇಕಿದೆ. ಅಧಿಕಾರಕ್ಕೇರಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಈ ನಡುವೆ ಬಿಜೆಪಿ 42 ಕಾಂಗ್ರೆಸ್ 32 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇತರೇ 14 ಕ್ಷೇತ್ರಗಳಲ್ಲಿ ಮುನ್ನಡೆ ಇದೆ.

ಈ ನಡುವೆ ಹರಿಯಾಣದಲ್ಲಿ ಸರ್ಕಾರ ರಚಿಸಲು ಎರಡು ಪಕ್ಷಗಳಿಗೆ ಜೆಜೆಪಿ ಪಕ್ಷದ ಬೆಂಬಲ ಪಡೆಯಬೇಕು. ಹೀಗಾಗಿ ಜೆಜೆಪಿ ಪಕ್ಷದ ನಾಯಕ ದುಷ್ಯಂತ್ ಚೌಟಾಲ ಕಾಂಗ್ರೆಸ್ ನಾಯಕರನ್ನ ಭೇಟಿಯಾಗಿ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಮಾತನಾಡಿರುವ ದುಷ್ಯಂತ್ ಚೌಟಾಲ, ಹರಿಯಾಣ ಜನ ಬದಲಾವಣೆ ಬಯಸುತ್ತಿದ್ದಾರೆ.ಯಾವ ಪಕ್ಷವೂ 40ರ ಗಡಿ ದಾಟುವುದಿಲ್ಲ. ಹೀಗಾಗಿ ಅಧಿಕಾರದ ಕೀ ನಮ್ಮ ಬಳಿ ಇದೆ ಎಂದಿದ್ದಾರೆ.

ಹಾಗೆಯೇ ಕಾಂಗ್ರೆಸ್ ದುಷ್ಯಂತ್ ಚೌಟಾಲಗೆ ಡಿಸಿಎಂ ಆಫರ್ ನೀಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ದುಷ್ಯಂತ್ ಚೌಟಾಲ, ಯಾರು ಸಿಎಂ ಸ್ಥಾನ ನೀಡುತ್ತಾರೋ ಅವರೊಂದಿಗೆ ಕೈ ಜೋಡಿಸಲು ಸಿದ್ಧ ಎಂದಿದ್ದಾರೆ.

ಇತ್ತ ಕಡೆ ಬಿಜೆಪಿ ಹರಿಯಾಣದಲ್ಲಿ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದ್ದು ದುಷ್ಯಂತ ಚೌಟಾಲ ಅವರನ್ನ ಮನವೊಲಿಸಲು  ಪ್ರಕಾಶ್ ಸಿಂಗ್ ಬಾದಲ್ ಅವರನ್ನ ಬಿಟ್ಟಿದ್ದಾರೆ. ಇಬ್ಬರು ನಾಯಕರು ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

Key words: Haryana –election- result- JJP party –leader- Dushyant Chautala- demanding -CM position