ಗ್ರೇಮ್ ಸ್ಮಿತ್’ಗೆ ಎಂಸಿಸಿ ಗೌರವ ಆಜೀವ ಸದಸ್ಯತ್ವ

ಲಂಡನ್, ಅಕ್ಟೋಬರ್ 24, 2019 (www.justkannada.in): ಕ್ರಿಕೆಟಿಗ ಗ್ರೇಮ್ ಸ್ಮಿತ್ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ(ಎಂಸಿಸಿ) ಗೌರವ ಆಜೀವ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಎಂಸಿಸಿ ತನ್ನ ಟ್ವಿಟರ್‌ನ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ(22)ದಕ್ಷಿಣ ಆಫ್ರಿಕಾ ನಾಯಕನಾಗಿದ್ದ ಸ್ಮಿತ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಸಾಕಷ್ಟು ಸ಻ಧನೆ ಮಾಡಿದ್ದರು.

ಈ ಎಲ್ಲ ಸಾಧನೆಗಳಿಗೆ ಗೌರವವಾಗಿ ಸ್ಮಿತ್ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ(ಎಂಸಿಸಿ) ಗೌರವ ಆಜೀವ ಸದಸ್ಯತ್ವ ನೀಡಲಾಗಿದೆ ಎಂದು ಎಂಸಿಸಿ ತಿಳಿಸಿದೆ.