ನವೆಂಬರ್ 15ರಿಂದ ಕನ್ನಡ ಪಾಠ ಮಾಡಲಿದ್ದಾರೆ ಕಾಳಿದಾಸ ಮೇಷ್ಟ್ರು

ಬೆಂಗಳೂರು, ಅಕ್ಟೋಬರ್ 24, 2019 (www.justkannada.in): ನವರಸ ನಾಯಕ ಜಗ್ಗೇಶ್ ಅಭಿನಯದ ʼಕಾಳಿದಾಸ ಕನ್ನಡ ಮೇಷ್ಟ್ರುʼಚಿತ್ರ ನವೆಂಬರ್ 15 ಕ್ಕೆ ತೆರೆಗೆ ಬರಲಿದೆ.

ಜಗ್ಗೇಶ್ ಜೊತೆ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಈ ಚಿತ್ರವನ್ನು ಕವಿರಾಜ್ ನಿರ್ದೇಶನ ಮಾಡಿದ್ದು, ಉದಯ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಇತ್ತೀಚೆಗಷ್ಟೇ ದರ್ಶನ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಇದೀಗ ಚಿತ್ರ ತಂಡ ಬಿಡುಗಡೆ ದಿನಾಂಕ ಪ್ರಕಟಿಸಿದೆ.