ಸರ್ಕಾರದ ಎಲ್ಲಾ ಹುದ್ದೆಗಳಲ್ಲೂ ಅಕ್ರಮ: ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುಗಡೆ ಮಾಡ್ತೇನೆ- ಡಿ.ಕೆ ಶಿವಕುಮಾರ್.

Promotion

ಬೆಂಗಳೂರು,ಮೇ,10,2022(www.justkannada.in):   ಕೆಪಿಎಸ್ ಸಿ ಒಂದೇ ಅಲ್ಲ. ಸರ್ಕಾರದ ಎಲ್ಲಾ ಹುದ್ದೆಗಳಲ್ಲೂ ಅಕ್ರಮ ನಡೆದಿದೆ. ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಪಿಡಬ್ಲ್ಯುಡಿ, ಕೆಪಿಎಸ್ಸಿ ಎಲ್ಲದರಲ್ಲೂ  ಅಕ್ರಮ ನಡೆದಿದೆ. ರಾಜ್ಯ ಸರ್ಕರದಲ್ಲಿ ಸಾಕಷ್ಟು ಅಕ್ರಮ ನಡೆದಿದೆ.  ಭ್ರಷ್ಟಾಚಾರವಲ್ಲದೇ ಈ ಸರ್ಕಾರದಲ್ಲಿ ಏನೂ ನಡೆದಿಲ್ಲ. ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುತ್ತೇನೆ ಎಂದರು.

ಸರ್ಕಾರದ ಎಲ್ಲಾ ಹುದ್ದೆಗಳ್ಲೂ ಅಕ್ರಮ ನಡೆದಿದೆ.  ಯಾವ ಯಾವ ಹುದ್ದೆಗೆ ಎಷ್ಟೆಷ್ಟು ಹಣ ಎಂದು ನಿಗದಿ ಮಾಡಲಾಗಿದೆ.  ದುಡ್ಡಿಲ್ಲದೇ ಸರ್ಕಾರ ಏನು ಮಾಡಿಲ್ಲ ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು.

Key words:  government – illegal-list – scams –kpcc-president-DK Shivakumar.