Thursday, August 13, 2026

BDA Apartments

Home Front Page  ಸಚಿವ ಅಶ್ವಥ್ ನಾರಾಯಣ್ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆಗೆ ಎಂ.ಬಿ ಪಾಟೀಲ್ ಅಸಮಾಧಾನ.

 ಸಚಿವ ಅಶ್ವಥ್ ನಾರಾಯಣ್ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆಗೆ ಎಂ.ಬಿ ಪಾಟೀಲ್ ಅಸಮಾಧಾನ.

ಬೆಂಗಳೂರು,ಮೇ,10,2022(www.justkannada.in):  ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಹಗರಣ ಬೆನ್ನಲ್ಲೆ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಅವರನ್ನ ಸಚಿವ ಅಶ್ವಥ್ ನಾರಾಯಣ್ ಭೇಟಿಯಾಗಿದ್ದಾರೆಂದು ಸುದ್ದಿಯಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಇನ್ನು ಈ  ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್,  ಕಾಂಗ್ರೆಸ್ಸಿಗರು ಏನು ಮಾಡಬಾರದು ಅಂತಾ ಅಶ್ವಥ್ ನಾರಾಯಣ್ ಎಂಬಿ ಪಾಟೀಲ್ ಅವರನ್ನ  ಭೇಟಿ ಮಾಡಿದ್ದಾರೆ. ರಕ್ಷಣೆಗಾಗಿ ಭೇಟಿ ಮಾಡಿದ್ದಾರೆ ಎಂದರು.

ಆದರೆ  ಡಿ.ಕೆ ಶಿವಕುಮಾರ್ ಹೇಳಿಕೆಯನ್ನ ತಳ್ಳಿಹಾಕಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಎಂ.ಬಿ ಪಾಟೀಲ್, ರಕ್ಷಣೆಗಾಗಿ ಭೇಟಿ ಮಾಡಿದ್ದಾರೆ ಎಂದಿದ್ದು ತಪ್ಪು.  ಅಶ್ವಥ್ ನಾರಾಯಣ್ ರಕ್ಷಣೆ ಮಾಡಲು ಸಾಧ್ಯವೇ..? ಡಿಕೆ ಶಿವಕುಮಾರ್ ಜತೆ ಮಾತನಾಡುತ್ತೇನೆ ಎಂದಿದ್ದಾರೆ.

ಅಶ್ವಥ್ ನಾರಾಯಣ್ ಭೇಟಿ ಮಾಡಿದ್ದಾರೆಂಬ ವಿಚಾರ ನಿರಾಕರಿಸಿದ ಎಂ.ಬಿ ಪಾಟೀಲ್,  ನಾನು ಅಶ್ವಥ್ ನಾರಾಯಣ್ ಭೇಟಿಯಾಗೇ ಇಲ್ಲ. 6 ತಿಂಗಳ ಹಿಂದೆ ಅವರನ್ನ ಭೇಟಿಯಾಗಿದ್ದೆ. ಮನೆಯಲ್ಲಲ್ಲ ವಿಧಾನಸೌಧದಲ್ಲಿ ಭೇಟಿಯಾಗಿದ್ದೆ. ನನ್ನ ಮಗ  ಅಶ್ವಥ್ ಮಗಳು ಒಂದೇ ಕ್ಲಾಸ್ ಮೇಟ್ ಎಂದರು.

Key words: MB Patil-DK Shivakumar- statement – Minister-Ashwath Narayan