ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಕಾನೂನು ಜಾರಿಗೆ ಬಿಡಲ್ಲ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

0
2

ಬೆಂಗಳೂರು,ಮೇ,10,2022(www.justkannada.in):  ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಕಾನೂನು ಜಾರಿ ಮಾಡಲು ಜೆಡಿಎಸ್  ಬಿಡಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಧರ್ಮದ ದಂಗಾಲ್ ಮೂಲಕ  ಅಶಾಂತಿ ಸೃಷ್ಠಿ ಮಾಡಲಾಗುತ್ತಿದೆ.  ಸರ್ವಜನಾಂಗದ ಶಾಂತಿಯ  ತೋಟದಲ್ಲಿ ಅಶಾಂತಿ ಸೃಷ್ಠಿಸಲು ಜೆಡಿಎಸ್  ಬಿಡಲ್ಲ. ಉತ್ತರ ಪ್ರದೇಶ ಮಾದರಿಯ ಕಾನೂನು ಜಾರಿ ಮಾಡಲು ಅವಕಾಶ ನೀಡಲ್ಲ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಅಂತವರಿಗೆ ಉತ್ತರ ಕೊಡುವ ಕಾರ್ಯಕ್ರಮ ಇದು ಎಂದರು.

ಹಣ ಇದ್ದರಷ್ಟೇ ಜೆಡಿಎಸ್ ನಲ್ಲಿ ಟಿಕೆಟ್ ಎಂಬ ಎಂಎಲ್ ಸಿ ಮರಿತಿಬ್ಬೇಗೌಡರ ಹೇಳಿಕೆಗೆ ಪರೋಕ್ಷ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ, ನಮ್ಮ ಕುಟುಂಬದ ಶಕ್ತಿ ಕುಂದಿಸುವ ಹುನ್ನಾರ ನಡೆಯುತ್ತಿದೆ. ನಮ್ಮ ಕುಟುಂಬವನ್ನೇ ಟಾರ್ಗೇಟ್ ಮಾಡ್ತಾರೆ.  ಕುಟುಂಬದ ರಾಜಕಾರಣದ ಪ್ರಶ್ನೆ ಇಲ್ಲಿ ಇಲ್ಲ. ಪಕ್ಷಕ್ಕೆ ಬಂದಾಗ ಎಷ್ಟು ಹಣ ಕೊಟ್ಟಿದ್ದಾರೆ ಎಷ್ಟು ಹಣ ಕೊಟ್ಟಿದ್ದಾರೆಂದು ಹೇಳಲಿ ಎಂದು ತಿಳಿಸಿದರು.

Key words: Uttar Pradesh-Model -Law -not enforced-Former CM- HD Kumaraswamy.