ಗೌರಿ ಗಣೇಶ ಹಬ್ಬ ಹಿನ್ನೆಲೆ: ಹೂವು ಹಣ್ಣುಗಳ ಬೆಲೆ ಏರಿಕೆ….

ಬೆಂಗಳೂರು,ಸೆ,1,2019(www.justkannada.in):  ಹಬ್ಬದ ಸೀಜನ್ ಬಂದು ಅಂದ್ರೆ ಹೂವು ಹಣ್ಣು ಬಟ್ಟೆಗಳ ಬೆಲೆ ಏರಿಕೆಯಾಗುವುದು ಸಹಜ ಅಂತೆಯೇ ಇಂದು ಮತ್ತು ನಾಳೆ ಗೌರಿ ಗಣೇಶ ಹಬ್ಬ ಹಿನ್ನೆಲೆ ವ್ಯಾಪಾರಿಗಳು ಏಕಾಏಕಿ ಹೂವು ಹಣ್ಣಿನ ಬೆಲೆ ಏರಿಕೆ ಮಾಡಿದ್ದಾರೆ.

ಹಬ್ಬದ ನೆಪದಲ್ಲಿ ಹಣ್ಣು ಮತ್ತು ಹೂವಿನ ವ್ಯಾಪಾರಿಗಳು ಗ್ರಾಹಕರಿಗೆ ಶಾಕ್ ನೀಡಿದ್ದಾರೆ.   1 ಕೆಜಿ ಮಲ್ಲಿಗೆ ಹೂವಿನ ಬೆಲೆ 600 ರೂ.ನಿಂದ  1ಸಾವಿರ ರೂಗೆ ಏರಿಕೆ ಮಾಡಲಾಗಿದೆ.  1 ಕೆಜಿ ಕನಕಾಂಬರ 700ರೂ ನಿಂದ 1800ರೂಗೆ, 1 ಕೆಜಿ ಸೇವಂತಿಗೆ 200ರೂ ನಿಂದ 350 ರೂಗೆ ಏರಿಕೆ ಮಾಡಲಾಗಿದೆ.

ಇನ್ನು ಸೇಬಿನ ಹಣ್ಣಿನ ಬೆಲೆ 120 ರೂನಿಂದ 160 ರೂಗೆ ದಾಳಿಂಬೆ ಹಣ್ಣು 100 ರೂ ನಿಂದ 150ಕ್ಕೆ ಏರಿಕೆಯಾಗಿದೆ. ಹಾಗೆಯೇ ದ್ರಾಕ್ಷಿ ಹಣ್ಣು 200 ರೂನಿಂತ 250 ಏಲಕ್ಕಿ ಬಾಳೆ ಹಣ್ಣು 80ರಿಂದ 150 ರೂಗೆ ಏರಿಕೆ ಮಾಡಿದ್ದಾರೆ.

Key words: Gauri Ganesha- festival  Flower- fruit –prices-rise