ಪದ್ಮರಾಜ ದಂಡಾವತಿ ಅವರ  ‘ಮಾಧ್ಯಮ ಭಾಷಾ ದೀಪಿಕೆ’ ಕೃತಿ ಬಿಡುಗಡೆ.

ಬೆಂಗಳೂರು,ಜೂನ್,5,2023(www.justkannada.in): ಬೆಂಗಳೂರಿನ ಎನ್. ಆರ್. ಕಾಲೊನಿಯಲ್ಲಿರುವ ಬಿ.ಎಂ.ಶ್ರೀ ಸ್ಮಾರಕ ಸಭಾಂಗಣದಲ್ಲಿ ನಡದ ಸಮಾರಂಭದಲ್ಲಿ ‘ವಿಕಾಸ ಪ್ರಕಾಶನ’ ಪ್ರಕಟಿತ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ  ‘ಮಾಧ್ಯಮ ಭಾಷಾ ದೀಪಿಕೆ’ ಕೃತಿಯನ್ನು ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಮನುಬಳಿಗಾರ್, ಪ್ರೊ. ಉಷಾರಾಣಿ ಅವರು ಲೋಕಾರ್ಪಣೆಗೊಳಿಸಿದರು‌.

ಬಿಡುಗಡೆಗೊಂಡ ಪ್ರಥಮ ಪ್ರತಿಯನ್ನು ಪ್ರಜಾವಾಣಿ ಸಂಸ್ಥಾಪಕರಾದ ಕೆ.ಎನ್ ಶಾಂತಕುಮಾರ್  ಅವರು ಸ್ವೀಕರಿಸಿದರು.

ಬಿಡುಗಡೆಗೊಂಡ ಹೊಸ ಕೃತಿ ‘ಮಾಧ್ಯಮ ಭಾಷಾ ದೀಪಿಕೆ’ ಅತ್ಯಂತ ಉಪಯುಕ್ತಕರವಾಗಿದೆ. ಪತ್ರಿಕೋದ್ಯಮ, ಶೈಕ್ಷಣಿಕ ವಲಯದಲ್ಲಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಪ್ರಾಧ್ಯಾಪಕರು ಬಳಸಲೇಬೇಕಾದ ಕೃತಿ ಇದಾಗಿದೆ ಎಂದು ಮುಖ್ಯ ಅತಿಥಿಯಾಗಿದ್ದ ಪ್ರೊ.ಎನ್. ಉಷಾರಾಣಿ ಅವರು ಕರೆಯಿತ್ತರು.

ಕೃತಿ ಬಿಡುಗಡೆಗೊಳಿಸಿದ ಪ್ರೊ.ಮಲ್ಲೇಪುರಂ ವೆಂಕಟೇಶ್ ಅವರು ಮಾತನಾಡಿ, ಕನ್ನಡ ಮಾಧ್ಯಮ ಭಾಷೆ ಬಳಕೆಯಲ್ಲಿ ವ್ಯಾಕರಣ, ವಾಕ್ಯ ರಚನೆ, ಭಾಷಾ ಶೈಲಿ ಮತ್ತು ಅರ್ಥೈಸುವಿಕೆ – ಅಂಶಗಳನ್ನು ಈ ಕೃತಿಯಲ್ಲಿ ದಂಡಾವತಿಯವರು ಉತ್ತಮ ಉದಾಹರಣೆ ಸಹಿತ ವಿವರಿಸಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತರು, ಸಂಪಾದಕರು, ಪ್ರಾಧ್ಯಾಪಕರು ಭಾಗವಹಿಸಿದ್ದರು. ಭಾರತಿ ಹೆಗಡೆ ನಿರೂಪಿಸಿದರು.

Key words: Release -Padmaraja Dandavati- ‘Madhyama Bhasha Deepike