ಬೇಡಿಕೆ ಈಡೇರುವವರೆಗೂ ನಾಲ್ಕು ಸಾರಿಗೆ ನಿಗಮಗಳನ್ನ ಬಂದ್ ಮಾಡಿ – ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮನವಿ..

ಬೆಂಗಳೂರು,ಡಿಸೆಂಬರ್,10,2020(www.justkannada.in):  ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸಾರಿಗೆ ನೌಕರರನ್ನ ಪೊಲೀಸರು ವಶಕ್ಕೆ ಪಡೆದರು.logo-justkannada-mysore

ಇನ್ನು ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ನೀಡಿರುವ ರೈತಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್, ಬೇಡಿಕೆ ಈಡೇರಿಸುವವರೆಗೂ ನಾಲ್ಕು ಸಾರಿಗೆ ನಿಗಮಗಳನ್ನ ಬಂದ್ ಮಾಡುವಂತೆ ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಾರಿಗೆ ನೌಕರರ ಬೇಡಿಕೆಯನ್ನ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಈಡೇರಿಸಬೇಕಿತ್ತು. ಆದರೆ ಈಡೇರಿಸಿಲ್ಲ. ಹೀಗಾಗಿ ನಾಳೆಯೂ ನೌಕರರು ಪ್ರತಿಭಟನೆ ನಡೆಸಲಿ. ನಾಳೆ 4 ಸಾರಿಗೆ ನಿಗಮಗಳು ಅನಿರ್ಧಿಷ್ಟಾವಧಿಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್  ಕರೆ ನೀಡಿದ್ದಾರೆ.

ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ  ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥ ಹಮ್ಮಿಕೊಂಡಿದ್ದರು. ಈ ಮಧ್ಯೆ ಬೆಳಿಗ್ಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾಗಿದ್ದ ಸಾರಿಗೆ ನೌಕರರ ಜಾಥ ಫ್ರೀಡಂ ಪಾರ್ಕ್ ತಲುಪಿ ಪ್ರತಿಭಟನೆ ನಡೆಸಲಾಗಿತ್ತು.

Key words: four- transport corporations –bandh-until -demand – farmer leader-kodihalli Chandrashekhar