ತಾರತಮ್ಯ ಆರೋಪ: ‘ಕೈ’ ನಾಯಕರ  ವಿರುದ್ದ ಅಸಮಾಧಾನ ಹೊರಹಾಕಿದ ಮಾಜಿ ಸಚಿವ ರಾಮಲಿಂಗರೆಡ್ಡಿ….

ಬೆಂಗಳೂರು,ಜೂ,4,2019(www.justkannada.in): ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ದ ಮಾಜಿ ಸಚಿವ ರೋಷನ್ ಬೇಗ್ ಅಸಮಾಧಾನ ಹೊರ ಹಾಕಿದ ಬಳಿಕ ಇದೀಗ  ಮಾಜಿ ಸಚಿವ ರಾಮಲಿಂಗರೆಡ್ಡಿ ‘ಕೈ’ ನಾಯಕರ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರ ಕಡೆಗಣನೆ ಮಾಡುತ್ತಿದೆ. ಕೆಲವು ಕಾಂಗ್ರೆಸ್ ಸಚಿವರಲ್ಲಿ ಸಂಘಟನಾ ದೂರದೃಷ್ಟಿತ್ವದ ಕೊರತೆ ಇದೆ. ಹೀಗಾಗಿ ಪಕ್ಷವೂ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು  ಮಾಜಿ ಸಚಿವ ರಾಮಲಿಂಗ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಟ್ವಿಟ್ಟರ್ ನಲ್ಲೂ ಅಸಮಾಧಾನ ಹೊರ ಹಾಕಿರುವ ರಾಮಲಿಂಗರೆಡ್ಡಿ, ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ಇರುವುದು, ಕೆಲವು ಸಚಿವರ ಕಾರ್ಯಕ್ಷಮತೆಯೂ ಸಹ ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಯಿತು.ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಪಕ್ಷದ ಕುರಿತು ಏನೂ ಅರಿವಿಲ್ಲದೇ ಬಂದ ಹೊಸಬರಿಗೆ,ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರಚನೆಯಾಗಿ ಒಂದು ವರ್ಷವಾಗಿದೆ. ನಾನು ಆರು ತಿಂಗಳಿನಿಂದ ಮಾತನಾಡಿಲ್ಲ. ನನಗೆ ಸಚಿವ ಸ್ಥಾನ ನೀಡಿ ಎಂದು ಕೇಳಿಲ್ಲ.  ಆದರೆ ಕಾಂಗ್ರೆಸ್ ನಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕಿರಿಯರಿಗೆ ಸ್ಥಾನ ನೀಡಬೇಕು ಹೀಗಾಗಿ ನಿಮಗೆ ಸ್ಥಾನ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಹಿರಿಯರಿಗೂ ಸ್ಥಾನ ಕೊಟ್ಟಿದ್ದಾರೆ. ನನಗೆ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ತಪ್ಪಾಗಿರುವಾಗ ನಾನು ಸುಮ್ಮನಿರುವುದು ಸರಿಯಲ್ಲ.  ಯುವಕರಿಗೆ ಆದ್ಯತೆ ನೀಡಿ. ಆದರೆ ಹಿರಿಯರನ್ನ ಕಡೆಗಣಿಸಬೇಡಿ. ಕೇವಲ  ಆರ್ ವಿದೇಶಪಾಂಡೆ ಐದಾರು ಬಾರಿ ಸಚಿವರಾಗಿದ್ದರು. ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹಾಗಾದರೇ ನನಗೇಗೆ ನೀಡಿಲ್ಲ. ನನಗೇಕೆ ತಾರತಮ್ಮ ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

Key words: former minister Ramalinga Reddy dissatisfaction against Congress leaders.

#bangalore #ramalingareddy #outrage #congressleader