ರಾಜ್ಯ ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮತ್ತೆ ಹಿನ್ನೆಡೆ: ಮೇಲ್ಮನವಿ ಅರ್ಜಿ ವಜಾ….

ಬೆಂಗಳೂರು,ಸೆ,17,2019(www.justkannada.in): ಕರ್ನಾಟಕ ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಮತ್ತೆ ಹಿನ್ನಡೆಯಾಗಿದೆ. ಇಡಿ ಸಮನ್ಸ್ ರದ್ಧು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ  ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.

ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದು ಮಾಡುವಂತೆ ಮನವಿ ಮಾಡಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಅರ್ಜಿಯನ್ನ ವಜಾಗೊಳಿಸಿತ್ತು. ಏಕಸದಸ್ಯಪೀಠದ ತೀರ್ಪು ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದರು.

ಆದರೆ ಹೈಕೋರ್ಟ್ ಸಿಜೆ ನೇತೃತ್ವದ ವಿಭಾಗೀಯ ಪೀಠ ಇದೀಗ ಮೇಲ್ಮನವಿ ಅರ್ಜಿಯನ್ನ ವಜಾಗೊಳಿಸಿದೆ. ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ತಾಂತ್ರಿಕ ಕಾರಣ ನೀಡಿ ವಜಾಗೊಳಿಸಲಾಗಿದೆ.

ಡಿ.ಕೆ ಶಿವಕುಮಾರ್ ಆಪ್ತರಿಗೆ ಒಂದು  ತಿಂಗಳು ರಿಲೀಫ್….

ದೆಹಲಿ ನಿವಾಸದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆಪ್ತರಿಗೆ ಒಂದು  ತಿಂಗಳು ರಿಲೀಫ್ ಸಿಕ್ಕಿದೆ. ನಾಲ್ಕು ವಾರಗಳ ಕಾಲ ಡಿಕೆಶಿ ಆಪ್ತರನ್ನ ಬಂಧಿಸದಂತೆ ಇಡಿಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಅಗತ್ಯ ಹಿನ್ನೆಲೆ ಡಿ.ಕೆ ಶಿವಕುಮಾರ್ ಆಪ್ತರನ್ನ ಬಂಧಿಸದಂತೆ ರಕ್ಷಣೆ ನೀಡುವಂತೆ ಮಧ್ಯಂತರ ಆದೇಶ ಮುಂದುವರೆಸುವಂತೆ ವಕೀಲರು ಮನವಿ ಮಾಡಿದ್ದರು.

Key words: Former minister -DK Sivakumar – high court- Appeal -dismissed