ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಗೂಂಡಾಗಳು ಎಂದ ಬಿಜೆಪಿ ಶಾಸಕ ಯತ್ನಾಳ್.

ಕಲ್ಬುರ್ಗಿ,ಮೇ,9,2022(www.justkannada.in): ಅಜಾನ್ ವಿರುದ್ಧ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು ಎಂದು ಹೇಳಿಕೆ ನೀಡಿರುವ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

ಈ ಕುರಿತು ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹರಿಪ್ರಸಾದ್ ಒಬ್ಬ ಆಂತರಿಕ ಭಯೋತ್ಪಾದಕ, ಹಿಂದೆ ಅವರು ಬೆಂಗಳೂರಿನ ಗೂಂಡಾ ಆಗಿದ್ದರು.  ‘ಅಸಲಿಗೆ, ಸಿದ್ದರಾಮಯ್ಯ ಅವರೊಬ್ಬರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಗೂಂಡಾಗಳು, ಸೋನಿಯಾ ಗಾಂಧಿ ಅವರು ಪಕ್ಷವನ್ನು ಗೂಂಡಾಗಳ ಕೈಗೊಪ್ಪಿಸಿ ನಿದ್ರೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಸಚಿವ ಆರಗ ಜ್ಞಾನೇಂದ್ರ ಅವರಿಗೆ ಗೃಹಖಾತೆ ನಿಭಾಯಿಸಲು ಅಗಲ್ಲ,  ಸಿಎಂ ಬೊಮ್ಮಾಯಿ ಅವರು ಅರಗ ಜ್ಞಾನೇಂದ್ರ ಅವರಿಗೆ ಬೇರೆ ಯಾವುದಾದರೂ ಖಾತೆ ಕೊಡಬೇಕು ಮತ್ತು ಗೃಹ ಇಲಾಖೆಯನ್ನು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಛಾತಿಯಿರುವವರಿಗೆ ನೀಡಬೇಕು, ಇದನ್ನು ನಾನು ಹಲವಾರು ಸಲ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. ಕೆಜಿ ಹಳ್ಳಿ ಘಟನೆಯಿಂದ ಅರಂಭಗೊಂಡು ನಮ್ಮ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವುದು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ  ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: congress-bk Hariprasad-bjp-MLA-Basanagowda patil yatnal