ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ಪಾಲಿಸಬೇಕು: ಅನಧಿಕೃತ ಲೌಡ್ ಸ್ಪೀಕರ್ ತೆರವಿಗೆ ಸಿಎಂ ಬೊಮ್ಮಾಯಿ ಸೂಚನೆ.

ಬೆಂಗಳೂರು,ಮೇ,9,2022(www.justkannada.in):  ರಾಜ್ಯದಲ್ಲಿ ಅಜಾನ್ ಗೆ ಪ್ರತಿಯಾಗಿ ಹಿಂದೂಪರ ಸಂಘಟನೆಗಳು  ಹನುಮಾನ್ ಚಾಲೀಸಾ ಪಠಣ ಹಮ್ಮಿಕೊಂಡಿರುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೀಸ್ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಸುಮಾರು 45 ನಿಮಿಷಗಳ ಕಾಲ ಚರ್ಚಿಸಿದ್ದು ಈ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಉಪಸ್ಥಿತರಿದ್ದರು. border-districts-state-covid-negative-test-outside-states-minister-basavaraja-bommai

ಸಭೆಯಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶ ಪಾಲಿಸಬೇಕು  ಇದು ಕೇವಲ ಹಿಂದೂ ಮಸ್ಲೀಮರಿಗಲ್ಲ. ಸಾರ್ವಜನಿಕ ಕಾರ್ಯಕ್ರಮಗಳಿಗೂ ಅನ್ವಯವಾಗುತ್ತದೆ. ಸುಪ್ರೀಂ ಆದೇಶದಂತೆ ಡೆಸಿಬಲ್ ಬಳಸಬೇಕು. ಅನಧಿಕೃತ ಲೌಡ್ ಸ್ಪೀಕರ್ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ.

ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಬಾರದು. ಅಜಾನ್ ವಿವಾದ ಸಂಬಂಧ ಸುಪ್ರೀಂಕೋರ್ಟ್ ಆದೇಶ ಪಾಲನೆಯಾಗಬೇಕು. ಎಲ್ಲಾ ಧರ್ಮಗಳಿಗೂ ಇದು ಅನ್ವಯವಾಗುತ್ತದೆ.  ಪರಿಸ್ಥಿತಿ ಸೂಕ್ಷ್ಮವಾಗಿ ನಿಭಾಯಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Key words: Ajan Controversy-CM Bommai-advises-police officers – situation -sensitively.

ENGLISH SUMMARY….

Please follow HC, SC directions: CM Bommai directs to remove illegal loudspeakers
Bengaluru, May 9, 2022 (www.justkannada.in): Chief Minister Basavaraj Bommai today organized a meeting with the police officials to discuss the Hanuman Chalisa recital by several Hindu outfits in response to the Azan in Karnataka.
Home Minister Araga Jnanendra, DG and IGP Praveen Sood, and other higher officials participated in the meeting that was held for 45 minutes.border-districts-state-covid-negative-test-outside-states-minister-basavaraja-bommai
The Chief Minister urged that irrespective of Hindus and Muslims, everyone should respect the Hon’ble Supreme Court and High Court orders. “The court orders are applicable to even public programs. The decibels should not cross the limits as mentioned by the Hon’ble Supreme Court,” he said and instructed the police officials to remove illegal loudspeakers.
Keywords: Chief Minister Basavaraj Bommai/ High Court/ Supreme Court directions/ remove illegal Loudspeakers