ಖಾಸಗಿ ಶಾಲೆಗಳಿಂದ ಆನ್‌ಲೈನ್ ಶಿಕ್ಷಣಕ್ಕೆ ಫೀಸ್ ವಿಚಾರ: ಈ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಲಿ- ಎಂಎಲ್ ಸಿ ಹೆಚ್.ವಿಶ್ವನಾಥ್

ಮೈಸೂರು,ನವೆಂಬರ್,25,2020(www.justkannada.in) : ಖಾಸಗಿ ಶಾಲೆಗಳಿಂದ ಆನ್‌ಲೈನ್ ಶಿಕ್ಷಣಕ್ಕೆ ಫೀಸ್ ವಿಚಾರ ಸಂಬಂಧ ಈ ಬಗ್ಗೆ ಶಿಕ್ಷಣ ಇಲಾಖೆ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.I didn't knew CM BSY will think so cheaply - KPCC President D.K. Shivakumar

ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ  ಹೆಚ್.ವಿಶ್ವನಾಥ್ , ಆನ್‌ಲೈನ್ ಶಿಕ್ಷಣಕ್ಕೆ ಖಾಸಗಿ ಶಾಲೆಗಳು ಫೀಸ್ ಕೇಳುತ್ತಿರುವ ವಿಚಾರ. ಈ ಬಗ್ಗೆ ಶಿಕ್ಷಣ ಇಲಾಖೆ ಕಠಿಣ ನಿರ್ಧಾರ ಕೈಗೊಳ್ಳಬೇಕು. ಕೇವಲ ಕಠಿಣ ನಿರ್ಧಾರವಲ್ಲ ಅದನ್ನ ಕಾರ್ಯರೂಪಕ್ಕೆ ತರಬೇಕು.

ನಮಗೆಲ್ಲ ಸಂಬಳ ಹಿಡಿದಿದ್ದಾರೆ. 30% ಸಂಬಳ ಹಿಡಿದು ಟಿಎಡಿಎ ಕಟ್ ಮಾಡಿದ್ದಾರೆ. ಆದ್ರೆ ಸರ್ಕಾರ ನೌಕರರಿಗೆ ಮಾತ್ರ ಸಂಬಳ ಹಿಡಿಯುತ್ತಿಲ್ಲವೇಕೆ. ಎಲ್ಲರು ಸಮಾನರು ಅಲ್ಲವೇ? ಎಲ್ಲರಿಗೂ ಒಂದೆ ಥರ ಇರಬೇಕು ಎಂದು ಹೆಚ್.ವಿಶ್ವನಾಥ್ ಹೇಳಿದರು.fees-online-education-private-schools-tough-decision-mlc-h-vishwanath

ಕೋವಿಡ್ ಕಂಟ್ರೋಲ್ ಯಾರು ಮಾಡಬೇಕು ಹಾಗಾದ್ರೆ. ಕೋವಿಡ್ ಕಂಟ್ರೋಲ್ ಮಾಡೋದರಲ್ಲಿ ಅಧಿಕಾರಿಗಳ ಪಾತ್ರವೇನು..? ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ನೀಡಿದರು.

Key words: Fees – online -education – private schools-tough decision -MLC -H. VISHWANATH.