ಆಸ್ತಿ ತೆರಿಗೆ ಪಾವತಿಗೆ ಮೈಸೂರು ಮಹಾನಗರ ಪಾಲಿಕೆ ನೀಡಿದ್ಧ ರಿಯಾಯಿತಿ ವಿಸ್ತರಣೆ.

ಮೈಸೂರು,ಆಗಸ್ಟ್,3,2021(www.justkannada.in): ತಮ್ಮ ವಾರ್ಷಿಕ ತೆರಿಗೆಯನ್ನು ಪಾವತಿಸುವ ಆಸ್ತಿ ಮಾಲೀಕರಿಗೆ ಮೈಸೂರು ಮಹಾನಗರ ಪಾಲಿಕೆ ನೀಡಿದ್ಧ ಶೇ.5 ರಿಯಾಯಿತಿಯನ್ನ ಇದೀಗ ಮತ್ತೆ ವಿಸ್ತರಣೆ ಮಾಡಿದೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವ ದೃಷ್ಠಿಯಿಂದ ಜುಲೈ 2021ರವರೆಗೆ ನೀಡಿದ್ಧ ಶೇ.5 ರಷ್ಟು ರಿಯಾಯಿತಿಯನ್ನು  ದಿನಾಂಕ 2-08-2021 ರನ್ವಯ ಆಗಸ್ಟ್ 2021ರ ಅಂತ್ಯದವರೆಗೆ  ವಿಸ್ತರಿಸಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡು ಆಸ್ತಿ ತೆರಿಗೆಯನ್ನ ಪಾವತಿಸಬೇಕು ಎಂದಯ ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಆಸ್ತಿ ತೆರಿಗೆ ಪಾವತಿಸುವವರಿಗೆ ಪಾಲಿಕೆಯಿಂದ ಕಳೆದ ಏಪ್ರಿಲ್‌ 1 ರಿಂದ 30ರವರೆಗೆ ಶೇ.5ರಷ್ಟು ರಿಯಾಯಿತಿ ನೀಡಲಾಗಿತ್ತು. ಆದರೆ ಕೋವಿಡ್‌-19 ಲಾಕ್‌ ಡೌನ್‌ ಮತ್ತು ಸಂಬಂಧಿತ ನಿಯಮಗಳ ಕಾರಣದಿಂದಾಗಿ, ಮೈಸೂರು ಮಹಾನಗರ ಪಾಲಿಕೆ ಈ ರಿಯಾಯಿತಿಯನ್ನು ಜುಲೈ 31ರವರೆಗೆ ವಿಸ್ತರಣೆ ಮಾಡಿತ್ತು.

ENGLISH SUMMARY….

MCC extends discount period on payment of property tax
Mysuru, August 3, 2021 (www.justkannada.in): The Mysore City Corporation, which had announced a 5% rebate on payment of property tax payment, has extended the last date.
MCC had announced a 5% rebate on payment of property taxes, as a measure to provide benefit to the property taxpayers till the end of July 2021. The period of rebate has been extended till the end of August 2021, according to a press release issued by MCC. The beneficiaries are also requested to utilize the opportunity and pay property taxes promptly.
Keywords: MCC/ Property tax/ benefit/ 5% rebate/ last date extended

Key words: Extension – mysore-city –corporation- Property Tax -Payment.