ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಇರೋದು ಸತ್ಯ- ಸ್ಪೋಟಕ ಹೇಳಿಕೆ ನೀಡಿದ ಕಿರುತರೆ ನಟಿ…

ಬೆಂಗಳೂರು,ಆಗಸ್ಟ್,31,2020(www.justkannada.in):  ಡ್ರಗ್ಸ್ ದಂಧೆಯಲ್ಲಿ  ಸ್ಯಾಂಡಲ್ ವುಡ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಕಿರುತರೆ ನಟಿ ಚಿತ್ರಲ್ ರಂಗಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.jk-logo-justkannada-logo

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ ಇರೋದು ಸತ್ಯ. ಇಂದ್ರಜಿತ್ ಲಂಕೇಶ್ ಸುಮ್ಮನೇ ಆರೋಪ ಮಾಡುತ್ತಿಲ್ಲ. ತನಿಖೆ ಮೂಲಕ ಸತ್ಯಾಂಶ ಹೊರಬರಲಿ ಎಂದು ಕಿರುತರೆ ನಟಿ ಚಿತ್ರಲ್ ರಂಗಸ್ವಾಮಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮದ ಜತೆ ಮಾತನಾಡಿರುವ ಚಿತ್ರಲ್ ರಂಗಸ್ವಾಮಿ, ಅವಕಾಶ ಬೇಕು ಅಂದ್ರೆ ಪಾರ್ಟಿಗೆ ಹೋಗಬೇಕು. ಪಾರ್ಟಿ, ಪಬ್ ಗಳಲ್ಲಿ ಕಾಣಿಸಿಕೊಳ್ಳಬೇಕು. ಎಲ್ಲರ ಜತೆ ಸಲುಗೆಯಿಂದ ಇರಬೇಕು. ಪಾರ್ಟಿಗೆ ಹೋದ್ರೆ ಗುರುತಿಸಿಕೊಳ್ಳಬೇಕು. ನಿರ್ಮಾಪಕರಿಗೆ ಹುಡುಗಿಯರ ಶೋಕಿ ಇದೆ.  ಹೀಗಾಗಿ ಸಲುಗೆಯಿಂದ ಇದ್ದರೇ ಮಾತ್ರ ಚಾನ್ಸ್ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.drugs-sandalwood-true-actress-explosive-statement

ಹಾಗೆಯೇ ಇಂದ್ರಜಿತ್ ಲಂಕೇಶ್ ಹೇಳಿರುವುದು ನಿಜ. ಅವರು ಸುಮ್ಮನೇ ಆರೋಪ ಮಾಡುತ್ತಿಲ್ಲ. ತನಿಖೆ ಮೂಲಕ ಸತ್ಯಾಂಶ ಹೊರಬರಲಿ ಎಂದು ನಟಿ ಚಿತ್ರಲ್ ರಂಗಸ್ವಾಮಿ ಹೇಳಿದ್ದಾರೆ.

Key words: Drugs- sandalwood- true  actress- explosive- statement