ಭಿನ್ನಾಭಿಪ್ರಾಯ ವಿಚಾರ: ಸಿಎಂ ಬಿಎಸ್ ವೈ ಭೇಟಿಯಾಗಿ ಚರ್ಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್…

ಬೆಂಗಳೂರು,ಅ,3,2019(www.justkannada.in):  ಬಿಬಿಎಂಪಿ ಮೇಯರ್ ಉಪಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ  ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಡುವೆ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದ ಹಿನ್ನೆಲೆ ಇದೀಗ ಉಭಯ ನಾಯಕರೂ ಚರ್ಚೆ ನಡೆಸಿ  ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ವೈ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿಎಂ ಬಿಎಸ್ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಿದ್ದಾರೆ. ಬಿಬಿಎಂಪಿ ಮೇಯರ್ ಉಪಮೇಯರ್ ಆಯ್ಕೆ ಸಂಬಂಧ ನಮ್ಮ ಜತೆ ಚರ್ಚಿಸದೆ ಏಕಾಏಕಿ ಏಕೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ರಿ ಎಂದು ಸಿಎಂ ಬಿಎಸ್ ವೈ ಈ ವೇಳೆ ಪ್ರಸ್ತಾಪಿಸಿದ್ದಾರೆ.

ಇದಕ್ಕೆ ವಿಷಾದ ವ್ಯಕ್ತಪಡಿಸಿದ ನಳೀಕ್ ಕುಮಾರ್ ಕಟೀಲ್ ,ಆ ರೀತಿ ಮಾಡಬಾರದಿತ್ತು. ಇನ್ಮುಂದೆ ಹಾಗೆ ಆಗಲ್ಲ ಎಂದು ಭೇಟಿ ವೇಳೆ ಸಿಎಂ ಬಿಎಸ್ ವೈ ಮನವೊಲಿಸಲು ಯತ್ನಿಸಿದರು  ಎನ್ನಲಾಗಿದೆ. ಇದೇ ವೇಳೆ  ಸಚಿವ ಬಸವರಾಜ್ ಬೊಮ್ಮಾಯಿ ಉಪಸ್ಥಿತರಿದ್ದರು.

Key words: state-bjp president –Nalin kumar katil-visit-CM BS yeddyurappa-residence