ಡ್ರಗ್ಸ್ ಪ್ರಕರಣ: ಅ.7ರವರೆಗೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್ ಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ.

ಮುಂಬೈ,ಅಕ್ಟೋಬರ್,4,2021(www.justkannada.in): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 7ರವರೆಗೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನ ಎನ್ ಸಿಬಿ ಕಸ್ಟಡಿಗೆ ನೀಡಿ ಮುಂಬೈನ ಕಿಲ್ಲಾ ಕೋರ್ಟ್ ಆದೇಶಿಸಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಅಧಿಕಾರಿಗಳು ಮುಂಬೈನ್ ಕಿಲ್ಲಾ ಕೋರ್ಟ್ ಗೆ ಬಂಧಿತರನ್ನ ಹಾಜರುಪಡಿಸಿದ್ದು ವಾದ ಪ್ರತಿವಾದ ತೀವ್ರಗೊಂಡಿತ್ತು.

ಶನಿವಾರ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ದಾಳಿ ನಡೆಸಿದ ನಂತರ ಖಾನ್ ಮತ್ತು ಇತರ ಏಳು ಮಂದಿಯನ್ನು  ಬಂಧಿಸಿದ್ದರು.

ಇದೀಗ ಇಂದು ಆರ್ಯನ್ ಖಾನ್, ಆತನ ಸ್ನೇಹಿತರಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು  ನ್ಯಾಯಾಲಯಕ್ಕೆ ಎನ್‌ಸಿಬಿ ಅಧಿಕಾರಿಗಳು ಹಾಜರುಪಡಿಸಿದ್ದರು.  ವಿಚಾರಣೆಯ ವೇಳೆ ಎನ್‌ಸಿಬಿ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಅರ್ಯನ್ ಖಾನ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಎನ್ ಸಿಬಿ ಕಸ್ಟಡಿ ವಿಸ್ತರಿಸುವಂತೆ ಕೋರಿದರು. ಸತ್ಯ ಮತ್ತು ಅವರ ಲಿಂಕ್‌ಗಳನ್ನು ಪರಿಶೀಲಿಸಲು ನಮಗೆ ಮೂವರು ಆರೋಪಿಗಳ ಪಾಲನೆ ಅಗತ್ಯವಿದೆ. ಸಮಾಜದಲ್ಲಿ, ಯುವಕರು ಮಾದಕದ್ರವ್ಯದ ಭೀತಿಯಿಂದ ಹೆಚ್ಚು ಪರಿಣಾಮ ಬೀರುತ್ತಾರೆ, ಎಂದು ಅವರು ಹೇಳಿದರು.

ಆರ್ಯನ್ ಖಾನ್  ಪರ ವಾದ ಮಂಡಿಸಿದ ವಕೀಲ ಸತೀಶ್ ಮನೇಶಿಂಡೆ, ಎನ್‌ಸಿಬಿಯು ಕೇವಲ ವಾಟ್ಸಾಪ್ ಚಾಟ್‌ಗಳನ್ನು ಅವಲಂಬಿಸಬಾರದು ಮತ್ತು ವಿಸ್ತೃತ ಕಸ್ಟಡಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಜಾಮೀನು ನೀಡುವಂತೆ ಮನವಿ ಮಾಡಿದ್ದರು.

ವಾದ ಪ್ರತಿವಾದ ಆಲಿಸಿದ ಕೋರ್ಟ್ ಇದೀಗ ಆರ್ಯನ್ ಖಾನ್ ಸೇರಿ ಮೂವರನ್ನು ಅಕ್ಟೋಬರ್ 7ರವರೆಗೆ ಎನ್ ಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ.

Key words: Drugs  Case – actor – Aryan Khan -Shah Rukh Khan- NCB custody