ಯುಪಿಯಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ತಾಲಿಬಾನ್ ಸರ್ಕಾರದ ವಿರುದ್ಧ ದೇಶವ್ಯಾಪಿ ಹೋರಾಟ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್.

ಮೈಸೂರು,ಅಕ್ಟೋಬರ್,4,2021(www.justkannada.in): ಉತ್ತರ ಪ್ರದೇಶದಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ತಾಲಿಬಾನ್ ಸರ್ಕಾರದ ವಿರುದ್ಧ ದೇಶವ್ಯಾಪಿ ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

ಉತ್ತರ ಪ್ರದೇಶದಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ , ಬಿಜೆಪಿಯ ನಾಯಕರು ರೈತರನ್ನ ಭಯೋತ್ಪಾದಕರು ಅಂತ ಹೇಳ್ತಾರೆ. ಈಗ ನೋಡಿದ್ರೆ ರೈತರ ಹತ್ಯೆ ಮಾಡ್ತಿದ್ದಾರೆ. 2022ಕ್ಕೆ ಉತ್ತರ ಪ್ರದೇಶದಲ್ಲಿ ಚುನಾವಣೆ ಬರುತ್ತಿದೆ. ಹೀಗಾಗಿ ಈ ರೀತಿಯ ಕೃತ್ಯದಲ್ಲಿ ಯುಪಿ ಸರ್ಕಾರ ಮುಂದಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಹಿಟ್ಲರ್ ಆಡಳಿತ ಇದೆ ಎಂದು ವಾಗ್ದಾಳಿ ನಡೆಸಿದರು.

ರೈತರ ಹತ್ಯೆಯನ್ನ ಖಂಡಿಸಿ ರೈತರಿಗೆ ಸಾಂತ್ವನ ಹೇಳಲು ಹೋದ ಪ್ರಿಯಾಂಕಾ ಗಾಂಧಿಯವರನ್ನ ಗೌಪ್ಯ ಸ್ಥಳದಲ್ಲಿ ಬಂಧಿಸಿ ಇಡಲಾಗಿದೆ. ನಿಮ್ಮ ಆ ಮೂರು ಕಾಯ್ದೆಗಳು ಯಾರಿಗೆ ಬೇಕು. ರೈತರ ಸಮಾಧಿ ಮೇಲೆ ಈ ಕಾಯ್ದೆಯನ್ನ ತರಲು ಮುಂದಾಗಿದ್ದಿರಾ. ಅದಾನಿ, ಅಂಬಾನಿಗೆ ನೆರವು ನೀಡಲು ಈ ಕಾಯ್ದೆ ತರುತಿದ್ದೀರಾ. ರಾಜ್ಯ, ಕೇಂದ್ರ ಸರ್ಕಾರಗಳು ರೈತ‌ಹಾಗೂ ಕಾರ್ಮಿಕ ವಿರೋಧಿ ಸರ್ಕಾರ. ಅದಾನಿ ಆದಾಯ ಎರಡು ವರ್ಷಗಳಲ್ಲಿ 2.5 ಲಕ್ಷ ಕೋಟಿ ಹೆಚ್ಚಿದೆ. ಅಂಬಾನಿ ಆದಾಯ 4.5 ಕೋಟಿ ಹೆಚ್ಚಾಗಿದೆ. ಈ ಮೂಲಕ ನಿಮ್ಮವರಿಗೆ ನೆರವು ನೀಡಲು ಈ ಕಾಯ್ದೆ ಜಾರಿಗೆ ತರುತ್ತಿದ್ದಿರಿ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು

ಯೋಗಿ ಆಧಿತ್ಯನಾಥ್ ಒಬ್ಬ ಹಿಟ್ಲರ್. ಅದಾನಿ ಬಂದರ್ ನಲ್ಲಿ 21 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಸಿಕ್ಕಿದೆ. ಈ ಹೆರಾಯಿನ್ ಎಲ್ಲಿಂದ ಬಂತು ? ನೆನ್ನೆ ಶಾರುಖ್ ಖಾನ್ ಮಗನ ಬಳಿ ಸಾಕಷ್ಟು ಮಾದಕ ವಸ್ತುಗಳ ದೊರೆತಿವೆ. ಇದನ್ನೆಲ್ಲ ನೋಡಿದರೆ ಬಿಜೆಪಿ ಸರ್ಕಾರ ಯುವ ಪೀಳಿಗೆಗೆ ಹೆರಾಯಿನ್ ನೀಡಲು ಮುಂದಾಗಿ ಅನ್ನಿಸುತ್ತಿದೆ ಕೇಂದ್ರ ಹಾಗೂ ಬಿಜೆಪಿ ಸರ್ಕಾರಗಳು ಹಿಟ್ಲರ್ ಸರ್ಕಾರ. ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್  ಗುಡುಗಿದರು.

ಇದೇ ವೇಳೆ ಮಾತನಾಡಿದ ಮಾಜಿ ಮಹಿಳಾ ಆಯೋಗದ ಆಧ್ಯಕ್ಷೆ ಮಂಜುಳಾ ಮಾನಸ, ಭಾರತದಲ್ಲಿ ತಾಲಿಬಾನ್ ಸಂಸ್ಕೃತಿ ತೀವ್ರವಾಗಿ ಬೆಳೆಯುತ್ತಿದೆ. ರೈತರಿಗೆ ಸಾಂತ್ವನ ಹೇಳಲು ಹೋದ ಪ್ರಿಯಾಂಕಾ ಗಾಂಧಿಯವರನ್ನ ಅರೆಸ್ಟ್ ಮಾಡ್ತಿರಿ. ಸಿ.ಆರ್.ಪಿ.ಸಿ 151ರ ಅಡಿಯಲ್ಲಿ ಯಾಕೆ ಬಂಧನ ಮಾಡ್ತಿರಿ.? ಅವರನ್ನ ಬಂಧನ ಮಾಡುವಂತಹ ಸಂದರ್ಭ ಎಲ್ಲಿತ್ತು. ರಾಮನ ಹೆಸರಿನಲ್ಲಿ ರಾವಣನ ಆಳ್ವಿಕೆಯನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಪ್ರಜಾಪ್ರಭುತ್ವ ಹೆಸರಿನಲ್ಲಿ ಹಿಟ್ಲರ್ ಸರ್ವಾಧಿಕಾರಿ ಸರ್ಕಾರ ನಡೆಯುತ್ತಿದೆ. ನಿಜವಾದ ತಾಲಿಬಾನಿಗಳು ಯಾರೇಂದು ಜನ ನೋಡುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಆದರು ಅವರಿಗೆ ಶಿಕ್ಷೆಯಾಗಬೇಕಿದೆ ಎಂದು ಕಿಡಿಕಾರಿದರು.
key words:protest- against  Taliban government -condemning – farmers –death-KPCC spokesperson- M. Laxman.