ಸಿಎಂ ವಿರುದ್ಧ ಬಹಿರಂಗ ಹೇಳಿಕೆ ಶೋಭೆ ತರುವುದಿಲ್ಲ-ಬಿಕೆ ಹರಿಪ್ರಸಾದ್ ವಿರುದ್ದ ಸಚಿವ ಎಂ.ಬಿ ಪಾಟೀಲ್ ಕಿಡಿ.

ಬೆಂಗಳೂರು,ಸೆಪ್ಟಂಬರ್,11,2023(www.justkannada.in):   ನಿನ್ನೆ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ವಿರುದ್ದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಹರಿಪ್ರಸಾದ್​​ ಹಲವು ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡ್ತಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿ ಹೇಳಿಕೆ ಕೊಡುವುದು ಶೋಭೆ ತರುವುದಿಲ್ಲ. ಸೋನಿಯಾ, ರಾಹುಲ್, ಖರ್ಗೆ ಜೊತೆ ನೇರ ಸಂಪರ್ಕದಲ್ಲಿ ಇದ್ದಾರೆ. ಏನಾದರೂ ಇದ್ದರೆ ವರಿಷ್ಠರ ಬಳಿಯೇ ನೇರವಾಗಿ ಹೇಳಬಹುದು ಎಂದರು.

ಬಿಕೆ ಹರಿಪ್ರಸಾದ್  ಹಿರಿಯ ನಾಯಕರು ರಾಜ್ಯಸಭೆ ಸದಸ್ಯರಾಗಿದ್ದವರು. ಹಲವು ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಹರಿ ಪ್ರಸಾದ್ ಪಕ್ಷಕ್ಕಿಂತ ದೊಡ್ಡವರಲ್ಲ ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು ಎಂದು ಎಂ.ಬಿ ಪಾಟೀಲ್ ಹೇಳಿದರು.

Key words: open- statement -against – CM -BK Hariprasad -Minister MB Patil.