ಮೈಸೂರಿನಲ್ಲಿ ಡ್ರಗ್ಸ್ ಪೆಡ್ಲರ್ ಗಳ ಮನೆ ಮೇಲೆ ದಾಳಿ: 9 ಮಂದಿ ಪೊಲೀಸರ ವಶಕ್ಕೆ.

Promotion

ಮೈಸೂರು,ಜನವರಿ,23,2023(www.justkannada.in):  ಬೆಳ್ಳಂ ಬೆಳಿಗ್ಗೆ ಸಾಂಸ್ಕೃತಿಕ ನಗರಿಯ ಡ್ರಗ್ಸ್ ಪೆಡ್ಲರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ನಗರದ 30 ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಶ್ಚಾನದಳ ಬಳಸಿ ಮನೆಗಳಲ್ಲಿ ತಪಾಸಣೆ ನಡೆಸಲಾಯಿತು. ಬೆಳಗಿನ ಜಾವ 4 ಗಂಡೆಯಿಂದ 7 ಗಂಟೆವರೆಗೆ 40 ಪೊಲೀಸ್ ತಂಡಗಳು ಏಕಕಾಲಕ್ಕೆ ವಿಭಿನ್ನ ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೆ ವೇಳೆ ಅರ್ಧ ಕೆಜಿ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. 9 ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಡ್ರಗ್ಸ್ ಪೆಡ್ಲರ್ ಗಳಿಗೆ ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಬಾನೋತ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ

Key words: Drug peddlers- house- raid –Mysore- police-9 arrested