ಮೈಸೂರಿನಲ್ಲಿ ಫ್ರೆಂಡ್ ಶಿಫ್ ಡೇ ಆಚರಿಸಿದ ವೆಸ್ಟ್ ಇಂಡೀಸ್ ನ 8 ದ್ವೀಪ ರಾಷ್ಟ್ರಗಳ ಭಾರತದ ರಾಯಭಾರಿ ‘ ಕನ್ನಡಿಗ’ ಡಾ.ಕೆ.ಜೆ. ಶ್ರೀನಿವಾಸ

 

ಮೈಸೂರು, ಆ.05, 2019 : (www.justkannada.in news) : ಭಾರತದ ಅತ್ಯಂತ ಕಿರಿಯ ವಯಸ್ಸಿನ ರಾಯಭಾರಿ ಎಂದೆನಿಸಿಕೊಂಡಿರುವ ಡಾ. ಕೆ.ಜೆ. ಶ್ರೀನಿವಾಸ ಸೋಮವಾರ ಮೈಸೂರಿಗೆ ಭೇಟಿ ನೀಡಿದ್ದರು. ಸ್ನೇಹಿತರ ದಿನಾಚರಣೆಯ ಮರುದಿನವೇ ವೈದ್ಯಕೀಯ ವ್ಯಾಸಂಗದ ವೇಳೆಯಲ್ಲಿನ ಸಹಪಾಠಿ ಗೆಳೆಯರನ್ನು ಭೇಟಿ ಮಾಡಿದ್ದು ವಿಶೇಷ.

ನಗರದ ಜೆಕೆ ಮೈದಾನದಲ್ಲಿ ಪ್ಲಾಟಿನಂ ಜ್ಯೂಬಿಲಿ ಆಡಿಟೋರಿಂ ನಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ (ಫ್ರೆಷರ್ಸ್ ಡೇ) ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸಿ ಹಿತವಚನ ನೀಡಿದರು. ಬಳಿಕ ಹಳೇಯ ಸಹಪಾಠಿ ಗೆಳೆಯರ ಜತೆ ಕಾಲೇಜಿನ ನೆಚ್ಚಿನ ಸಿಟ್ ಔಟ್ ಗಳಿಗೆ ಭೇಟಿ ನೀಡಿ ಸಂತಸಗೊಂಡರು.

ಈ ವೇಳೆ ಡಾ.ಕೆ.ಜೆ. ಶ್ರೀನಿವಾಸ ಅವರ ವೈದ್ಯಕೀಯ ಗೆಳೆಯರಾದ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ವೈದ್ಯರಾದ ಡಾ. ಯೋಗೇಶ್, ಡಾ. ರಾಮರಾಜು, ಡಾ. ದತ್ತಾತ್ರಿ, ಶಿವಪ್ರಕಾಶ್, ವಿಜಯ್ ಹಾಗೂ ಇತರರು ಜತೆಗಿದ್ದು ಫ್ರೆಂಡ್ ಶಿಫ್ ಡೇ ಗೊಂದು ಸಾರ್ಥಕತೆ ತಂದರು.

ಯಾರು ಈ ಡಾ. ಕೆ.ಜೆ. ಶ್ರೀನಿವಾಸ.

Dr. K.J. Srinivasa-Indian Foreign Service-visiits-mysore-medicle-college

ಡಾ.ಶ್ರೀನಿವಾಸ ಅವರು ಮೂಲತಃ  ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿನ ಕೋಟೆಹಾಳ್ ಗ್ರಾಮದವರು. ಇವರು ತಮ್ಮ ಶಾಲಾ ಶಿಕ್ಷಣವನ್ನು ಧಾರವಾಡದಲ್ಲಿ ಪೂರ್ಣಗೊಳಿಸಿ ಬಳಿಕ ಪ್ರೌಢಶಿಕ್ಷಣ ಹಾಗೂ ಪಿಯುಸಿಯನ್ನು ಚಿತ್ರದುರ್ಗದಲ್ಲಿ ವ್ಯಾಸಂಗ ಮಾಡಿದರು. ಆನಂತರ 2000 ನೇ ಇಸವಿಯಲ್ಲಿ ಮೈಸೂರಿನ ಎಂ.ಎಂ.ಸಿ.ಯಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದರು. ಆಗಲೇ ಅವರಿಗೆ ಯುಪಿಎಸ್ಸಿ ಪರೀಕ್ಷೆಗಳ ಬಗ್ಗೆ ಆಕರ್ಷಿತರಾದದ್ದು. ಜತೆಗೆ ವೈದ್ಯಕೀಯ ಶಿಕ್ಷಣದ ಜತೆಜತೆಗೆ ಯುಪಿಎಸ್ಸಿ ಪರೀಕ್ಷೆಯನ್ನು ಸಹ ಎದುರಿಸಿ ತೇರ್ಗಡೆ ಹೊಂದಿ ಐಎಫ್ಎಸ್ ( Indian Foreign Service) ಸೇರ್ಪಡೆಗೊಂಡರು.
ವಿದ್ಯಾರ್ಥಿ ದೆಸೆಯಿಂದಲೂ ಇತಿಹಾಸ ವ್ಯಾಸಂಗ ಮಾಡುವುದು, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಘ್ರಹಿಸುವುದು ಡಾ. ಶ್ರೀನಿವಾಸ ಅವರ ಹವ್ಯಾಸವಾಗಿತ್ತು. ಇದೇ ಅವರನ್ನು ಯುಪಿಎಸ್ಸಿ ಪರೀಕ್ಷೆ ಎದುರಿಸುವಂತೆ ಪ್ರೇರೆಪಿಸಿ ಅದರಲ್ಲಿ ಯಶಸ್ಸುಗಳಿಸಲು ನೆರವಾಯಿತು.
ಮೆಡಿಕಲ್ ವ್ಯಾಸಂಗ ಮಾಡಿ ವಿದೇಶಿ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ ಡಾ. ಶ್ರೀನಿವಾಸ, ಒರ್ವ ಡಾಕ್ಟರ್ ಆಗಿ ವೈಯಕ್ತಿಕವಾಗಿ ಒಂದು ಸಿಮೀತ ಪರೀದಿಯಲ್ಲಿ ಮಾತ್ರ ಜನ ಸೇವೆ ಮಾಡಬಹುದು. ಆದರೆ ಯುಪಿಎಸ್ಸಿ ಪರೀಕ್ಷೆ ಮೂಲಕ ಆಡಳಿತ ವ್ಯವಸ್ಥೆಯ ಉನ್ನತ ಸ್ಥಾನ ಅಲಂಕರಿಸಿ ಅದರ ಚುಕ್ಕಾಣಿ ಹಿಡಿದು ಆಮೂಲಕ ಸಾವಿರಾರು ಮಂದಿಗೆ ಉಪಯುಕ್ತವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈ ಯೋಚನೆಯೇ ನನ್ನನ್ನು ಯುಪಿಎಸ್ಸಿ ಪರೀಕ್ಷೆಗಳ ಕಡೆ ಹೆಚ್ಚು ವಾಲುವಂತೆ ಮಾಡಿದ್ದು.
ಈ ನಿಟ್ಟಿನಲ್ಲಿ ನನಗೆ ಸಾರ್ಥಕವೆನಿಸುವ ಕೆಲಸ ಮಾಡಿದ ತೃಪ್ತಿ ಇದೆ ಎಂದ ಡಾ.ಶ್ರೀನಿವಾಸ, 2010-2013 ರ ವರೆಗೆ ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಯಲ್ಲಿ ರೀಜನಲ್ ಪಾಸ್ ಪೋರ್ಟ್ ಅಧಿಕಾರಿಯಾಗಿ ಮಾಡಿದ ಸೇವೆ ನಿಜಕ್ಕೂ ತೃಪ್ತಿ ತಂದಿದೆ ಎಂದರು. ಪಾಸ್ ಪೋರ್ಟ್ ಗಾಗಿ ಕರ್ನಾಟಕದ ಜನ ಪರದಾಡುವ ದಿನಗಳಲ್ಲಿ ಬೆಂಗಳೂರು ಕೇಂದ್ರದಲ್ಲೇ ಅದು ಸುಲಭವಾಗಿ ಲಭಿಸುವಂತೆ ಮಾಡಿದ್ದು ಹೆಮ್ಮೆ ಮೂಡಿಸಿದೆ. ಈ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಾಗಿದ್ದ ಶಂಕರ್ ಬಿದರಿ ಹಾಗೂ ಜ್ಯೋತಿ ಪ್ರಕಾಶ್ ಮಿರ್ಜಿ ಅವರ ನೆರವನ್ನು ಡಾ.ಶ್ರೀನಿವಾಸ ಸ್ಮರಿಸಿಕೊಂಡರು.

ಸೇವಾ ಹಿನ್ನೆಲೆ :

2002 ನೇ ಬ್ಯಾಚ್ ನ ಐಎಫ್ಎಸ್ ಅಧಿಕಾರಿ. ಮ್ಯಾಂಡ್ರಿಡ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ 2004 ರಿಂದ 2007 ರ ವರೆಗೆ ಸೇವೆ. 2007 ರಿಂದ 2010 ರ ತನಕ ಲೀಮಾ, 2010 ರಿಂದ 2013 ರ ತನಕ ಕರ್ತವ್ಯ ನಿರ್ವಹಣೆ. ಬಳಿಕ ಬೆಂಗಳೂರು ಪಾಸ್ ಪೋರ್ಟ್ ಕಚೇರಿಯಲ್ಲಿ ಪ್ರಾದೇಶಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ. ಬಳಿಕ 2013 ರಿಂದ 2016 ರ ತನಕ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಡಿಪ್ಯೂಟಿ ಕೌನ್ಸಿಲ್ ಜನರಲ್ ಆಗಿ ಕರ್ತವ್ಯ ನಿರ್ವಹಣೆ. 2016 ರಿಂದ 2019 ರ ಜುಲೈ 12 ರ ತನಕ ಜೋಹಾನ್ಸ್ ಬರ್ಗ್ ನಲ್ಲಿ ಕೌನ್ಸಲ್ ಜನರಲ್ ಆಫ್ ಇಂಡಿಯಾ ಆಗಿ ಸೇವೆ. ನಂತರ ಇದೀಗ ಗಯಾನದಲ್ಲಿ ಭಾರತದ ಹೊಸ ರಾಯಭಾರಿಯಾಗಿ ನೇಮಕ. ಜತೆಗೆ ವೆಸ್ಟ್ ಇಂಡಿಯಾದ ದ್ವೀಪ ರಾಷ್ಟ್ರಗಳಾದ ಸೆಂಟ್ ಕಿಟ್ಸ್ ಅಂಡ್ ನೇವಿಸ್, ಆಂಟಿಗೂವ ಅಂಡ್ ಬಾರ್ಬೂಡಾ, ಆಂಗೂಲ ಅಂಡ್ ಕಾರಿಕಾಂ ರಾಷ್ಟ್ರಗಳ ರಾಯಭಾರಿಯಾಗಿಯೂ ನೇಮಕಗೊಂಡಿದ್ದಾರೆ.

key words : Dr. K.J. Srinivasa-Indian Foreign Service-visiits-mysore-medicle-college

—————

CV of Dr. K.J. Srinivasa

Dr. K.J. Srinivasa, belonging to the 2002 batch of Indian Foreign Service, has worked in different capacities in the Indian Diplomatic Missions in Madrid (July 2004 – Sep 2007), Lima (Oct 2007 – Sep 2010) and San Francisco (as Deputy Consul General from Apr 2013 – July 2016). Serving as the Regional Passport Officer in Bangalore from 2010 to 2013, he was instrumental in the implementation of the path-breaking Passport Seva Project (PSP). Dr Srinivasa has been the Consul General of India to Johannesburg since October 2016 till 12 July 2019. He has now been appointed by the Government of India as the new High Commissioner of India to Guyana, St Kitts & Nevis, Antigua & Barbuda, Anguilla and Permanent Representative to CARICOM and will be based in Georgetown, Guyana. He is the first officer in his batch to be posted as Ambassador and one of youngest ever Ambassadors.

Born on 29 October 1977, Dr. Srinivasa did his primary and middle school education from St Joseph’s High School, Dharwad; High School from Chinmuladri National High School, Chitradurga; Pre University (PUC) from Government Science College, Chitradurga; and graduated in MBBS from Government Medical College, Mysore in 2000. He is fluent in Spanish, Hindi, Kannada and English and is conversant in German, Russian and French. Dr. Srinivasa is married to Mrs. G S Ashwini and is blessed with two sons – Athrav and Samanyu.
————-