ಟೇಪ್ ಕಟ್ ಮಾಡಿಕೊಂಡು ಹೋದ್ರೆ ಆಗಲ್ಲ: ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು- ಶಾಸಕರಿಗೆ ಡಿ.ಕೆ ಶಿವಕುಮಾರ್ ಎಚ್ಚರಿಕೆ.

Promotion

ಬೆಂಗಳೂರು,ಸೆಪ್ಟಂಬರ್,17,2022(www.justkannada.in):  ಮೇಕೆದಾಟು ಪಾದಯಾತ್ರೆ ಇದೀಗ ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ನಾಯಕರು ಪಕ್ಷವನ್ನ ಸಂಘಟಿಸುತ್ತಿದ್ದು ಈ ಮಧ್ಯೆ ಕೆಲಸ ಮಾಡದ ಶಾಸರಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶಾಸಕರು ಏನು ಮಾಡಬೇಕೆಂದು ಟಾರ್ಗೆಟ್ ನೀಡಲಾಗಿದೆ. ರಣದೀಪ್ ಸುರ್ಜೇವಾಲ ಟಾರ್ಗೆಟ್ ನೀಡಿದ್ದಾರೆ. ಕೆಲಸ ಮಾಡಿದವರಿಗೆ ಯಾಕ್ರಿ ಟಿಕೆಟ್..?   ನನಗೆ ನಂಬರ್ ಬೇಕು ನಮ್ಮ ಸರ್ಕಾರ ಬರಬೇಕು. ಶಾಸಕರು ಕೇವಲ ಮದುವೆಗೆ ಅಟೆಂಡ್ ಆಗೋದಲ್ಲ. ಟೇಪ್ ಕಟ್ ಮಾಡಿಕೊಂಡು ಹೋದರೆ ಆಗಲ್ಲ.

ಬೂತ್ ಮಟ್ಟದಲ್ಲಿ ಹೋಗ ಕೆಲಸ ಮಾಡಬೇಕು ಹಾಗೆಯೇ ಕೆಲಸ ಮಾಡಿದರೇ ಮಾತ್ರ ಪಕ್ಷ ಸಂಘಟನೆ ಆಗುತ್ತದೆ ಎಂದು ಡಿ.ಕೆ ಶಿವಕುಮಾರ್ ಶಾಸಕರಿಗೆ ಸಲಹೆ ನೀಡಿದ್ದಾರೆ.

Key words: DK Shivakumar- warns -MLAs – work – booth level.