ಮೇ3 ರಂದು ‘ಎಚ್ ಡಿ ದೇವೇಗೌಡರ ಬದುಕು ಮತ್ತು ದುಡಿಮೆ ನೇಗಿಲ ಗೆರೆಗಳು’ ಪುಸ್ತಕ ಕುರಿತು ಸಂವಾದ.

Promotion

ಮೈಸೂರು,ಮೇ,1,2023(www.justkannada.in):  ‘ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಬದುಕು ಮತ್ತು ದುಡಿಮೆ ನೇಗಿಲ ಗೆರೆಗಳು’  ಪುಸ್ತಕ ಕುರಿತು ಮೇ 3 ರಂದು ಚರ್ಚೆ ಮತ್ತು ಸಂವಾದ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಬುಧವಾರ(ಮೇ3) ಸಂಜೆ  5 ಗಂಟೆಗೆ  ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ ವಿಜ್ಞಾನ ಭವನದ  ಇನ್ಸ್ ಟಿಟ್ಯೂಷನ್ ಆಫ್ ಎಕ್ಸಲೆನ್ಸ್ ನಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದೆ. ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಹಾಗೂ ವಿವಿಯ ಹಳೆಯ ವಿದ್ಯಾರ್ಥಿಗಳ  ಸಂಘದ ಅಧ್ಯಕ್ಷರಾದ ಪ್ರೊ. ಎಸ್ .ಎನ್ ಹೆಗ್ಡೆ,  ಮೈಸೂರು ವಿವಿ ಕುಲಪತಿ ಪ್ರೊ. ಎನ್.ಕೆ ಲೋಕನಾಥ್ , ಮೈಸೂರು ವಿವಿ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷರಾದ ಪ್ರೊ.ಕೆ.ಎಸ್ ರಂಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಹಾಗೆಯೇ ಹಿರಿಯ ಸಂಪಾದಕರು ಮತ್ತು ಮೂಲ ಪುಸ್ತಕದ ಲೇಖಕರಾದ ಸುಗತ ಶ್ರೀನಿವಾಸರಾಜು , ಕವಿ ಮತ್ತು ಪುಸ್ತಕದ ಕನ್ನಡ ಅನುವಾದಕರಾದ ರೋಸಿ ಡಿ’ಸೋಜಾ ಅವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಸುಗತ ಶ್ರೀನಿವಾಸ್ ಅವರು ಬರೆದಿರುವ ಪೆಂಗ್ವಿನ್ ಸಂಸ್ಥೆ ಪ್ರಕಟಿಸಿರುವ ‘FURROWS IN A FIELD THE UNEXPLORED LIFE OF H.D.DEVEGOWDA’  ಪುಸ್ತಕವನ್ನ ರೋಸಿ ಡಿ’ಸೋಜಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

Key words: Discussion – book –About-HD devegowda-mysore university