ವಾಣಿಜ್ಯ ಬಳಕೆಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರ 171 ರೂ. ಇಳಿಕೆ.

ಬೆಂಗಳೂರು,ಮೇ,1,2023(www.justkannada.in): ವಾಣಿಜ್ಯ ಬಳಕೆಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರ 171.50 ರೂ. ಇಳಿಕೆಯಾಗಿದ್ದು ಈ ಮೂಲಕ ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ವಾಣಿಜ್ಯ ಎಲ್ ಪಿಜಿ ಸಿಲಿಂಡರ್‌ ಗಳ ದರವನ್ನು 171.50 ರೂ. ಕಡಿತಗೊಳಿಸಲಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ನವದೆಹಲಿಯಲ್ಲಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ದರ 1856.50 ರೂ., ಕೋಲ್ಕತ್ತಾದಲ್ಲಿ ರೂ 1960.50, ಮುಂಬೈನಲ್ಲಿ ರೂ 1808.50 ಮತ್ತು ಚೆನ್ನೈನಲ್ಲಿ ರೂ 2021.50. ತೈಲ ಕಂಪನಿಗಳು ತಮ್ಮ ವೆಬ್‌ಸೈಟ್‌ ನಲ್ಲಿ ಹೊಸ ದರಗಳನ್ನು ನವೀಕರಿಸಿವೆ.

ಪ್ರಸ್ತುತ 14.2 ಕೆಜಿ ಗೃಹಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ .  ಏಪ್ರಿಲ್ 1, 2023 ರಂದು, ವಾಣಿಜ್ಯ ಎಲ್ ಪಿಜಿ ಸಿಲಿಂಡರ್‌ ಗಳ ಬೆಲೆಯನ್ನು ಸಹ ಕಡಿತಗೊಳಿಸಲಾಗಿತ್ತು.

Key words: LPG -gas cylinder- price -commercial use – Rs.171. decrease