ಬಾಕ್ಸ್ ಆಫೀಸ್ ಸುಲ್ತಾನ: 100 ಕೋಟಿ ಕ್ಲಬ್ ಸೇರಿದ ರಾಬರ್ಟ್!

ಬೆಂಗಳೂರು, ಏಪ್ರಿಲ್ 1, 2021 (www.justkannada.in):

ರಾಬರ್ಟ್ 100 ಕೋಟಿ ಕ್ಲಬ್ ಸೇರಿದ್ದು, ಬಾಕ್ಸ್ ಆಫೀಸ್ ಸುಲ್ತಾನ ದಚ್ಚು ಹೊಸ ದಾಖಲೆ ಬರೆದಿದ್ದಾರೆ.

ಯೆಸ್. ‘ರಾಬರ್ಟ್’ ಸಿನಿಮಾ ಸ್ಯಾಂಡಲ್​ವುಡ್​ನ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 100 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಅಂದಹಾಗೆ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ‘ರಾಬರ್ಟ್‌’ ಸಿನಿಮಾ ಮೊದಲ ದಿನವೇ 17.24 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

‘ರಾಬರ್ಟ್’ 100 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಇದಾಗಿದೆ ಎಂದು ಸ್ವತಃ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅನೌನ್ಸ್​ ಮಾಡಿದ್ದಾರೆ.

2018ರಲ್ಲಿ ತೆರೆಕಂಡ ‘ಕೆಜಿಎಫ್’ ಸಿನಿಮಾ ಕೇವಲ 7 ದಿನಕ್ಕೆ 100 ಕೋಟಿ ರೂ. ಗಳಿಸಿತ್ತು. ಕೆಜಿಎಫ್ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೂ ಡಬ್ ಆಗಿದ್ದರಿಂದ ಅಷ್ಟು ಪ್ರಮಾಣದ ಕಲೆಕ್ಷನ್ ಮಾಡಿತ್ತು.

ಆದರೆ ರಾಬರ್ಟ್ ಕನ್ನಡದಲ್ಲೇ 100 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ.