ಥಿಯೇಟರ್’ನಲ್ಲಿ ಯುವರತ್ನ ಹವಾ! ಮುಂಜಾನೆಯೇ ಥಿಯೇಟರ್ ಗೆ ಬಂದ ಅಪ್ಪು ಫ್ಯಾನ್ಸ್

ಬೆಂಗಳೂರು, ಏಪ್ರಿಲ್ 1, 2021 (www.justkannada.in): ಬಹುನಿರೀಕ್ಷಿತ ಯುವರತ್ನ ಸಿನಿಮಾ ಇಂದು ಅದ್ದೂರಿಯಾಗಿ ತೆರೆಗೆ ಬಂದಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಗೆ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲೆಡೆ ಮುಂಜಾನೆಯಿಂದಲೇ ಶೋಗಳು ಆರಂಭವಾಗಿವೆ.

ಮೊದಲ ಶೋನಲ್ಲೇ ಯುವರತ್ನ ನೋಡಲು ಅಭಿಮಾನಿಗಳು ಬೆಳ್ಳಂಬೆಳಗ್ಗೆ ಚಿತ್ರಮಂದಿರದ ಮುಂದೆ ಮುಗಿಬಿದ್ದಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕರ್ನಾಟಕದಲ್ಲಿ ಸುಮಾರು 400ರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯುವರತ್ನ ಬಿಡುಗಡೆಯಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲೂ ಹೆಚ್ಚು ಅಂದರೆ 200ರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.