ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ! ಒಡೆಯ ರಿಲೀಸ್ ದಿನಾಂಕ ಫಿಕ್ಸ್

ಬೆಂಗಳೂರು, ನವೆಂಬರ್ 20, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ‘ಒಡೆಯ’ ಚಿತ್ರದ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ.

ಮುಂದಿನ ತಿಂಗಳು ’12’ಕ್ಕೆ ತೆರೆಗೆ ಬರಲು ರೆಡಿಯಾಗಿದೆಯಂತೆ. ಈ ಮೊದಲು ಒಡೆಯ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಸಲ್ಮಾನ್ ಖಾನ್ ಮತ್ತು ಸುದೀಪ್ ಅಭಿನಯದ ‘ದಬಾಂಗ್-3’ ಚಿತ್ರದ ರಿಲೀಸ್ ದಿನವೆ ‘ಒಡೆಯ’ ಕೂಡ ದರ್ಶನ ನೀಡಲಿದ್ದಾನೆ ಎನ್ನುವ ಸುದ್ದಿ ಹರಿದಾಡಿತ್ತು.

ಆದರೀಗ ಚಿತ್ರತಂಡ ಅಂದುಕೊಂಡಿದಕ್ಕಿಂತ ಮುಂಚಿತವಾಗಿಯೆ ರಿಲೀಸ್ ಮಾಡಲು ಮುಂದಾಗಿದೆ. ಇನ್ನು ವಿಶೇಷ ಅಂದರೆ ಚಿತ್ರದ ಟ್ರೈಲರ್ ರಿಲೀಸ್ ಗೂ ಡೇಟ್ ಫಿಕ್ಸ್ ಆಗಿದೆ. ಮೂಲಗಳ ಪ್ರಕಾರ ‘ಒಡೆಯ’ ಟ್ರೈಲರ್ ಡಿಸೆಂಬರ್ ‘1’ಕ್ಕೆ ತೆರೆಗೆ ಬರುತ್ತಿದೆಯಂತೆ.