Wednesday, August 5, 2026

BDA Apartments

Home Front Page ಡಿಕೆ ಶಿವಕುಮಾರ್ ಒಳಗೊಂದು ಹೊರಗೊಂದು ಮಾತನಾಡುವುದು ಬಿಡಲಿ-ಸಚಿವ ಬಿ.ಸಿ.ಪಾಟೀಲ್ ತಿರುಗೇಟು…

ಡಿಕೆ ಶಿವಕುಮಾರ್ ಒಳಗೊಂದು ಹೊರಗೊಂದು ಮಾತನಾಡುವುದು ಬಿಡಲಿ-ಸಚಿವ ಬಿ.ಸಿ.ಪಾಟೀಲ್ ತಿರುಗೇಟು…

ಬೆಂಗಳೂರು,ಸೆಪ್ಟಂಬರ್.23,2020(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೀಸನ್ ರಾಜಕಾರಣಿ. ಅವರಿಗೆ ಒಳಗೊಂದು ಹೊರಗೊಂದು ಮಾತನಾಡುವುದನ್ನು ಅಭ್ಯಾಸವಾಗಿ ಬಿಟ್ಟಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.jk-logo-justkannada-logo

ವಿಧಾನಸೌಧದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಕೃಷಿಸಚಿವ ಬಿ.ಸಿ ಪಾಟೀಲ್ , ನಿನ್ನೆ ಸದನದ ಒಳಗೆ ಬಿ. ಸಿ ಪಾಟೀಲ್ ನನ್ನ ಆತ್ಮೀಯ ಸ್ನೇಹಿತ ಎಂದವರು ಸಂಜೆ ಹೊತ್ತಿಗೆ ತಮ್ಮ ಮಾತು ಬದಲಾಯಿಸಿದ್ದಾರೆ. ಹೀಗಾಗಿ ಒಳಗೊಂದು, ಹೊರಗೊಂದು, ರೂಂನಲ್ಲೊಂದು ಮಾತನಾಡುವುದು ಶಿವಕುಮಾರ್‌ ಗೆ ಅಭ್ಯಾಸವಾಗಿದೆ. ಅವರು ತಮ್ಮ ತೆವಲಿಗೆ ಮಾತನಾಡುವುದನ್ನು ಬಿಡಲಿ ಎಂದು ತಿರುಗೇಟು ನೀಡಿದರು. dk shivakumar-speak –outside-Minister- B.C. Patil.

ಎಪಿಎಂಸಿ ಕಾಯ್ದೆಯಿಂದ ಯಾವುದೇ ನಷ್ಟವಿಲ್ಲ.‌ ರೈತರಿಗೆ ಒಳ್ಳೆಯದೇ ಆಗಲಿದೆ.ರೈತರು ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆಂಬುದು ಸ್ಪಷ್ಟವಾಗಬೇಕು.ರೈತರು ತಮ್ಮ ಹೋರಾಟ ಕೈಬಿಡಬೇಕೆಂದು ಬಿ.ಸಿ.ಪಾಟೀಲ್ ಮನವಿ ಮಾಡಿದರು.

Key words:  dk shivakumar-speak –outside-Minister- B.C. Patil.