ಸಾವರ್ಕರ್ ಫೋಟೊ ಅಳವಡಿಸಿದ್ಧಕ್ಕೆ ಆಕ್ಷೇಪ: ಎಸ್ ಡಿಪಿಐ ಕಾರ್ಯಕರ್ತರಿಂದ ಸ್ವಾತಂತ್ರ್ಯ ರಥಕ್ಕೆ ಅಡ್ಡಿ.

ದಕ್ಷಿಣ ಕನ್ನಡ,ಆಗಸ್ಟ್,15,2021(www.justkannada.in): ಸ್ವಾತಂತ್ರತ್ಯೋತ್ಸವ ಹಿನ್ನೆಲೆ ಫೋಟೋ ಅಳವಡಿಸಿದ  ವಿಚಾರಕ್ಕೆ  ಸಂಬಂಧಿಸಿದಂತೆ ಜಟಾಪಟಿ ನಡೆದು ಕೈ ಕೈ ಮುಲಾಯಿಸುವ ಹಂತಕ್ಕೆ ತಲುಪಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ದಕ್ಷಿಣ ಕನ್ನಡದ ಪುತ್ತೂರಿನ ಕಬಕ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗ್ರಾಮಪಂಚಾಯಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ರಥದಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಎಸ್​ಡಿಪಿಐ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ರಥಕ್ಕೆ ತಡೆಯೊಡ್ಡಿದರು.

ಅಲ್ಲದೆ ಸಾವರ್ಕರ್ ಬದಲು ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ  ಒತ್ತಾಯ ಮಾಡಿದರು ಎನ್ನಲಾಗಿದೆ. ಈ ವೇಳೆ ರಥಕ್ಕೆ ಅಡ್ಡಪಡಿಸಿದವರ ಮೇಲೆ ಕಾರು ಹತ್ತಿಸುವ ಯತ್ನವೂ ನಡೆದಿದ್ದು ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೀಗೆ ಫೋಟೋ ವಿಚಾರಕ್ಕೆ ಶುರುವಾದ ಜಗಳ ದೊಡ್ಡದಾಗುತ್ತಾ ಹೋಗಿ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ಸಮಯದಲ್ಲಿ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪುತ್ತೂರು ಠಾಣಾ ಪೊಲೀಸರು ಎಸ್ ಡಿಪಿಐ ಕಾರ್ಯಕರ್ತರನ್ನು ಚದುರಿಸಿದ್ದಾರೆ.

Key words: dakshina kannada-Savarkar -photo – freedom chariot -objection- SDPI activists