Thursday, August 13, 2026

BDA Apartments

Home Front Page ಪ್ರವಾಹ ಸ್ಥಳಗಳಿಗೆ ಇಂದು ಮಾಜಿ ಸಿಎಂ ಎಚ್ಡಿಕೆ ಭೇಟಿ: ಸಂತ್ರಸ್ಥರ ಸಮಸ್ಯೆ ಆಲಿಕೆ

ಪ್ರವಾಹ ಸ್ಥಳಗಳಿಗೆ ಇಂದು ಮಾಜಿ ಸಿಎಂ ಎಚ್ಡಿಕೆ ಭೇಟಿ: ಸಂತ್ರಸ್ಥರ ಸಮಸ್ಯೆ ಆಲಿಕೆ

ಬೆಂಗಳೂರು, ಆಗಸ್ಟ್ 08, 2019 (www.justkannada.in): ಇಂದು ಮಾಜಿ ಸಿಎಂ ಎಚ್‍ ಡಿ ಕುಮಾರಸ್ವಾಮಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ರಾಜ್ಯದೆಲ್ಲೆಡೆ ಸುರಿಯುತ್ತಿರುವ ಮಹಾಮಳೆಗೆ ರಾಜ್ಯವೇ ತತ್ತರಿಸಿ ಹೋಗಿದೆ. ಈ ಹಿನ್ನಲೆಯಲ್ಲಿ ಅವರು ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಜ್ವರದಿಂದ ಬಳಲುತ್ತಿರುವ ಕಾರಣ ನೆರೆಸಂತ್ರಸ್ತರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಎಚ್ಡಿಕೆ ಮಾಡಿದ್ದಾರೆ.

ರಾಜ್ಯದ ಜನರು ನೆರೆ ತತ್ತರಿಸಿರುವುದನ್ನು ಕಂಡು ನನ್ನ ಮನಸ್ಸು ತುಡಿಯುತ್ತಿದೆ. ಆದಕಾರಣ ಇಂದು ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.ಇಂದು ಬೆಳಗಾವಿ, ಸಂಕೇಶ್ವರ, ಚಿಕ್ಕೋಡಿ, ನವಲಗುಂಡ ಹಾಗೂ ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನ ಆಲಿಸಲಿದ್ದಾರೆ.