ಹರ್ ಘರ್ ತಿರಂಗಾ ಅಭಿಯಾನ ಬಗ್ಗೆ ಟೀಕೆ ಮಾಡುವುದು ದೇಶ ವಿರೋಧಿ ಕೃತ್ಯದಂತೆ – ಸಿಎಂ ಬೊಮ್ಮಾಯಿ.

ಮೈಸೂರು,ಆಗಸ್ಟ್,11,2022(www.justkannada.in): ಹರ್ ಘರ್ ತಿರಂಗಾ ಅಭಿಯಾನದ  ಬಗ್ಗೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಸಿಎಂ ಬಸವರಾಜ ಬೊಮ್ಮಾಯಿ,  ತಿರಂಗಾ ಅಭಿಯಾನದ ಬಗ್ಗೆ ಟೀಕೆ ದೇಶ ವಿರೋಧಿ ಕೃತ್ಯದಂತೆ  ಎಂದು ಹೇಳಿದ್ದಾರೆ.

ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಹೇಳಲು ಬಂದಿರುವೆ. 75 ನೇ ಸ್ವಾತಂತ್ರ್ಯೋತ್ಸವದ ಸಿದ್ಧತೆ ನಡೆಸುತ್ತಿದ್ದು, ರಾಜ್ಯಾದ್ಯಂತ ಸರ್ಕಾರ ಅದ್ಧೂರಿಯಾಗಿ ಆಚರಿಸಲಿದೆ. ಹಿನ್ನೆಲೆ, ಮುಂದಿನ‌ ನಮ್ಮ ದೇಶದ ಭವಿಷ್ಯದ ನಮ್ಮ ಜನತೆಯ ಕೈಯಲ್ಲಿದೆ ಎಂದರು.

ಹರ್ ಘರ್ ತಿರಂಗಾ ಕಾಂಗ್ರೆಸ್ ಟೀಕೆ ವಿಚಾರ ಕುರಿತು ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, ತ್ರಿವರ್ಣ ಧ್ವಜ  ತ್ಯಾಗ, ಬಲಿದಾನ‌, ಹೋರಾಟದಿಂದ ಸಿಕ್ಕಿರುವುದು. ಸ್ವತಂತ್ರ ಪೂರ್ವದ ಹಿರಿಯರು ಹೋರಾಟ ಮಾಡಿರುವ ಫಲ. ಸ್ವತಂತ್ರ್ಯ ಹೋರಾಟವನ್ನ ತಿರುಚದೆ ಸತ್ಯಾಸತ್ಯತೆ ತಿಳಿಸಬೇಕಿದೆ.ತಿರಂಗಾ ಧ್ವಜದಲ್ಲಿ ಭಾರತದ ಏಕತೆ, ಸ್ವಾತಂತ್ರ್ಯತೆ ಎಲ್ಲ ಅಡಗಿದೆ. ಅದರ ಕುರಿತು ಟೀಕೆ ಮಾಡಿ ಮಾತನಾಡುವುದು ದೇಶ ವಿರೋಧಿ ಕೃತ್ಯದಂತೆ. ಅಂತಹ ಕೀಳು ಮಟ್ಟದ ಮಾತಿಗೆ ಜನತೆ ಬೆಲೆ ಕೊಡಲ್ಲ. ಜನ ಮತ್ತಷ್ಟು ಸ್ಪೂರ್ತಿ ಪ್ರೇರಣೆಯಿಂದ ಆಚರಣೆ ಮಾಡ್ತಾರೆ. ಸ್ವತಂತ್ರದ ಬಗ್ಗೆ ಕೆಲವರಿಗೆ ಇತಿಹಾಸ ಗೊತ್ತಿಲ್ಲ. ಕೆಲವರು ಅದನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಇನ್ನು ಮಳೆಹಾನಿ ಸಂಬಂಧ ಪರಿಹಾರ ನೀಡಲಾಗುವುದು. ಮೊದಲ ಹಂತದಲ್ಲಿ ಪರಿಹಾರ ನೀಡುತ್ತಿದ್ದೇವೆ. ಇದಕ್ಕಾಗಿ ಎಲ್ಲ ರೀತಿಯ ಕಾರ್ಯ ಚಟುವಟಿಕೆ ಸಿದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಒಮಿಕ್ರಾನ್ ರೂಪಾಂತರ ತಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕೇಂದ್ರದಿಂದ ಸೂಚನೆ ಬರುವ ಮುನ್ನ ಎಚ್ಚೆತ್ತು ಕೊಂಡಿದ್ದೇವೆ. ನಿರಂತರವಾಗಿ ಅದರ ಕುರಿತು ಸಂಶೋಧನೆ ನಡೆಯುತ್ತಿದೆ. ರಾಜ್ಯದಲ್ಲಿ ಸದ್ಯ ಯಾವುದೇ ಆತಂಕವಿಲ್ಲ ಎಂದರು.

Key words: Criticize -Har Ghar Tiranga Abhiyan -congress– CM- Bommai-mysore