ಸದನದೊಳಗೆ ಅಭಿಪ್ರಾಯ ಮಂಡಿಸಲು ಪ್ರತಿಪಕ್ಷಗಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿಲ್ಲ: ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಆರೋಪ

ಬೆಂಗಳೂರು, ಸೆಪ್ಟೆಂಬರ್ 18, 2023 (www.justkannada.in): ಸದನದೊಳಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಪ್ರತಿಪಕ್ಷಗಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.

ಇಂದು ಈ ಕುರಿತು  ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೆ ದೂರಿದರು. ಜತೆಗೆ ಸಂಸತ್ತಿನ ಒಳಗಿನ ಕಲಾಪಗಳನ್ನು ನೇರ ಪ್ರಸಾರ ಮಾಡುವಂತೆ ಮನವಿ ಮಾಡಿದರು.

ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನವಾದ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ವಿರೋಧ ಪಕ್ಷದ ಸಂಸದರು ಮಾತನಾಡುವಾಗ ಅವರತ್ತ ಗಮನ ಹರಿಸಿ.ನಮಗೆ ಹೊರಗೆ ಅವಕಾಶ ಸಿಗುವುದಿಲ್ಲ.ಆದ್ದರಿಂದ ದಯವಿಟ್ಟು ನಮಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಮಣಿಪುರದ ಜನಾಂಗೀಯ ಹಿಂಸಾಚಾರದ ಬಗ್ಗೆಯೂ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸದನದಲ್ಲಿ ಪ್ರಧಾನಿ ಹೇಳಿಕೆ ನೀಡಲು ಪ್ರತಿಪಕ್ಷಗಳು ಸಾಕಷ್ಟು ಪ್ರಯತ್ನಿಸಿದವು. ಆದರೆ ಪ್ರಧಾನಿ ನಿಮ್ಮ ಮಾತನ್ನು ಕೇಳದಿರುವುದು ಸಮಸ್ಯೆಯಾಗಿದೆ ಎಂದು ಶ್ರೀ ಖರ್ಗೆ ತಿರುಗೇಟು ನೀಡಿದರು.