ಹೃದಯ ತೊಂದರೆ: ಬ್ರಿಯಾನ್ ಲಾರಾ ಆಸ್ಪತ್ರೆಗೆ ದಾಖಲು, ಚೇತರಿಕೆ

Promotion

ಮುಂಬೈ, ಜೂನ್ 26, 2019 (www.justkannada.in): ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಹೃದಯ ತೊಂದರೆಗೊಳಗಾಗಿ ನಿನ್ನೆ ಮುಂಬೈನ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ಅವರು ಆರಾಮವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ವಿಶ್ವಕಪ್ ಕಾಮೆಂಟರಿ ಮಾಡಲು ಕೆಲವು ದಿನಗಳಿಂದ ಲಾರಾ ಮುಂಬೈನಲ್ಲೇ ವಾಸ್ತವ್ಯವಿದ್ದಾರೆ.

ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿದ್ದರಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸಮಸ್ಯೆ ಗಂಭೀರವಲ್ಲ. ಸದ್ಯ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.