ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ಸ್’ಗೆ ಕ್ಷಣಗಣನೆ

ಬೆಂಗಳೂರು, ಜೂನ್ 17, 2021 (www.justkannada.in): ನಾಳೆಯಿಂದ ಐತಿಹಾಸಿಕ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ಪಂದ್ಯ ಶುರುವಾಗಲಿದೆ.

ವಿರಾಟ್​​ ಕೊಹ್ಲಿ ಸಾರಥ್ಯದಲ್ಲಿ ಟೀಂ ಇಂಡಿಯಾ ಪ್ರಬಲ ನ್ಯೂಜಿಲ್ಯಾಂಡ್​ ವಿರುದ್ಧ ಸೆಣೆಸಾಟಕ್ಕೆಸಜ್ಜಾಗಿದೆ.

ಭಾರತ ತಂಡದ ಈಗಿನ ಫಾರ್ಮ್ ಮತ್ತು ಆಟಗಾರರಲ್ಲಿರುವ ಜೋಶ್​ ನೋಡಿದರೆ ಭಾರತ ತಂಡವೇ ಫೇವರೀಟ್ ಆಗಿದೆ.

ನ್ಯೂಜಿಲ್ಯಾಂಡ್​ ತಂಡ ಸುಲಭವಾಗಿ ಶರಣಾಗುವುದಿಲ್ಲ. ಹೀಗಾಗಿ ಕಣಕ್ಕಿಳಿದ ಮೇಲೆ ಮೈದಾನದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ಫೈನಲ್ಸ್ ಸಾಕಷ್ಟು ಕುತೂಹಲ ಮೂಡಿಸಿದೆ.