ಕುಣಿಗಲ್ ಶಾಸಕ ರಂಗನಾಥ್ ಗೆ ಕೊರೋನಾ ಪಾಸಿಟಿವ್. ದೃಢ…

Promotion

ಬೆಂಗಳೂರು,ಜು,6,2020(www.justkannada.in):  ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಅವರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ಕೊರೋನಾ ಸೋಂಕಿರುವುದು ದೃಢವಾಗಿದ್ದು, ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎನ್ನಲಾಗಿದೆ. ಈ ಕುರಿತು  ಮಾತನಾಡಿರುವ ಅವರು, ನಿನ್ನೆ ಸಂಜೆ ವರದಿ ಬಂದಿದ್ದು ಕೊರೋನಾ ಲಕ್ಷಣಗಳಿಲ್ಲದ್ದಿದ್ದರೂ ಪಾಸಿಟಿವ್ ಬಂದಿದೆ. ಇಂದು ಆಸ್ಪತ್ರೆಗೆ ದಾಖಲಾಗುತ್ತೇನೆ, ಕೋವಿಡ್ ಟೆಸ್ಟ್ ಗಳನ್ನ ಮತ್ತಷ್ಟು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.corona-positive-kunigal-mla-ranganath

Key words: Corona Positive – Kunigal- MLA- Ranganath.