ಜಿಮ್ ವರ್ಕೌಂಟ್’ಗೆ ಹೊಸ ಜೋಡಿ: ನಿಖಿಲ್ ಫುಲ್ ಖುಷ್

ಮುಂಬೈ, ಜುಲೈ 06, 2020 (www.justkannada.in): ಇಷ್ಟು ದಿನ ಒಂಟಿಯಾಗಿ ವ್ಯಾಯಾಮ ಮಾಡುತ್ತಿದ್ದ ನಿಖಿಲ್​ಗೆ ಈಗ ಸ್ಫೂರ್ತಿ ನೀಡುವ ಜತೆಗಾರ್ತಿಯೊಬ್ಬರು ಸಿಕ್ಕಿದ್ದಾರಂತೆ. ಆ ಸ್ಫೂರ್ತಿ ಯಾರೆಂದು ನಿಖಿಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಯಾವಾಗಲು ವ್ಯಾಯಾಮ ಮಾಡಲು ಜಿಮ್ ಇರಬೇಕೆಂದಿಲ್ಲ. ಅದಕ್ಕೆ ನಮ್ಮೊಳಗೆ ಪ್ರೇರಣೆ ಬರಬೇಕು ಎಂದಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿ.

ಪ್ರಕೃತಿಯ ಮಧ್ಯೆ ನನ್ನ ಬಾಳಸಂಗಾತಿ ಜೊತೆ ವ್ಯಾಯಾಮ ಮಾಡುತ್ತಿರುವುದಾಗಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ತನಗೆ ಪ್ರೇರಣೆ ಪತ್ನಿ ರೇವತಿ ಎಂದೂ ಬರೆದುಕೊಂಡಿದ್ದಾರೆ.