Friday, August 14, 2026

BDA Apartments

Home Cinema ಮಲೈಕಾ ಮದುವೆ ಗಾಸಿಪ್’ಗಳಿಗೆ ಸ್ಪಷ್ಟನೆ ನೀಡಿದ ಅರ್ಜುನ್ ಕಪೂರ್

ಮಲೈಕಾ ಮದುವೆ ಗಾಸಿಪ್’ಗಳಿಗೆ ಸ್ಪಷ್ಟನೆ ನೀಡಿದ ಅರ್ಜುನ್ ಕಪೂರ್

ಮುಂಬೈ, ಜುಲೈ 06, 2020 (www.justkannada.in): ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಈ ಜೋಡಿ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಅರ್ಜುನ್ ಕಪೂರ್ ತನಗಿಂತ 12 ವರ್ಷ ದೊಡ್ಡವರಾಗಿರುವ ನಟಿ ಮಲೈಕಾ ಅವರನ್ನು ವರಿಸಲಿದ್ದಾರೆ. ಅಂದಹಾಗೆ ಮಲೈಕಾ ಸಲ್ಮಾನ್ ಸಹೋದರ ಅರ್ಬಾಸ್ ಖಾನ್ ಗೆ ವಿಚ್ಛೇದನ ನೀಡಿದ ನಂತರ ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ಇಬ್ಬರು ಸದಾ ಜೊತೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಆದರೆ ಈ ಬಗ್ಗೆ ಅರ್ಜುನ್ ಸ್ಪಷ್ಟನೆ ನೀಡಿದ್ದಾರೆ. ಸದ್ಯದಲ್ಲಿ ಮದುವೆ ಪ್ಲಾನ್ ಇಲ್ಲ ಎಂದು ಹರಿದಾಡುತ್ತಿದ್ದ ಸುದ್ದಿಗೆ ತೆರೆ ಎಳೆದಿದ್ದಾರೆ ಅರ್ಜುನ್ ಕಪೂರ್.