ರಾಜ್ಯದಲ್ಲಿ ಜನರು ಸಹಕಾರ ಕೊಡದಿದ್ರೆ ಲಾಕ್ ಡೌನ್ ಅನಿವಾರ್ಯ- ಗೃಹ ಸಚಿವ ಅರಗ ಜ್ಞಾನೇಂದ್ರ

ಚಿಕ್ಕಮಗಳೂರು,ಜನವರಿ,1,2022(www.justkannada.in):  ರಾಜ್ಯದಲ್ಲಿ ಕೋವಿಡ್ ಹೆಚ್ಚಾದ್ರೆ ಲಾಕ್ ಡೌನ್ ಅನಿವಾರ್ಯ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಲಾಕ್ ಡೌನ್ ಬಗ್ಗೆ ಸುಳಿವು ನೀಡಿದ್ದಾರೆ.

ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಜನರು ಸಹಕಾರ ಕೊಡದಿದ್ದರೇ ಲಾಕ್ ಡೌನ್ ಅನಿವಾರ್ಯ. ಕೋವಿಡ್ ಹೆಚ್ಚಾದರೇ ಲಾಕ್ ಡೌನ್ ಅನಿವಾರ್ಯ. ಜನರ ಜೀವ ಉಳಿಸುವುದು ಸರ್ಕಾರದ ಬದ್ಧತೆಯಾಗಿದೆ. ಜನರು ಕೋವಿಡ್  ನಿಯಮಗಳನ್ನ ಪಾಲಿಸಬೇಕು ಎಂದರು.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ  ಕಾಂಗ್ರೆಸ್ ಪಾದಯಾತ್ರೆಗೆ ಬೇಸರ ವ್ಯಕ್ತಪಡಿಸಿದ ಸಚಿವ ಅರಗ ಜ್ಞಾನೇಂದ್ರ, ಪಾದಯಾತ್ರೆಗೆ ಅನುಮತಿ ಕೊಡುವುದು ಬಿಡುವುದು ಬೇರೆ ವಿಚಾರ. ಕೋವಿಡ್  ಸಮಯದಲ್ಲಿ ರಾಜಕಾರಣ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಬೊಮ್ಮಾಯಿ ಸರ್ಕಾರದಲ್ಲಿ ಯಾವ ಸಚಿವರನ್ನೂ ಕೈ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: corona-Lockdown – state- Home Minister- Araga Jnanendra

ENGLISH SUMMARY….

“If people won’t cooperate lockdown will become inevitable in the state: Home Minister Araga Jnanendra
Chikkamagaluru, January 1, 2021 (www.justkannada.in): Home Minister Araga Jnanendra today informed that imposition of lockdown will become inevitable in the state if the COVID cases increase.
Speaking at Chikkamagaluru today, he informed that if people won’t cooperate, imposition of lockdown will become inevitable. The government must save the lives of the people. I request the people to follow the COVID appropriate rules compulsorily he said.
Expressing his displeasure on the Congress call for padayatra demanding implementation of the Mekedatu project, he informed that permitting the padayatra is a different issue. “However it is not appropriate to do politics during the COVID time,” he added.
In his reply on the probability of cabinet shuffle, he said that Chief Minister Bommai’s government will not make anyone sad.
Keywords: COVID/ lockdown/ inevitable if cases increase/ Home Minister/ Araga Jnanendra