ನನ್ನ ನಿರ್ಧಾರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ-ಸಚಿವ ಆನಂದ್ ಸಿಂಗ್.

ಹೊಸಪೇಟೆ,ಆಗಸ್ಟ್,11,2021(www.justkannada.in):  ನೀರಿಕ್ಷಿಸಿದ್ಧ ಖಾತೆ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ಹೊರ ಹಾಕಿರುವ ಸಚಿವ ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು  ನಿರ್ಧರಿಸಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಸಚಿವ ಆನಂದ್ ಸಿಂಗ್, ನಾನು ನನ್ನ ನಿರ್ಧಾರ ಏನೆಂಬುದನ್ನ ಸಿಎಂಗೆ ಈಗಾಗಲೇ ತಿಳಿಸಿದ್ದೇನೆ. ನನ್ನ ನಿರ್ಧಾರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ನಾನು ಏನ್ ಹೇಳಿದ್ದೆನೋ ಆ ಮಾತಿಗೆ ಬದ್ಧನಾಗಿದ್ದೇನೆ. ಇಂದು ಮುಖ್ಯಮಂತ್ರಿ ಭೇಟಿಯಾಗಲು ತೆರಳುತ್ತಿದ್ದೇನೆ. ಆ ನಂತ್ರ ನನ್ನ ರಾಜಕೀಯ ಜೀವನ ಅಂತ್ಯವೋ, ಆರಂಭವೋ ಎನ್ನುವ ಬಗ್ಗೆ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ.

ನನ್ನ ರಾಜಕೀಯ ಜೀವನ ಆರಂಭಗೊಂಡಿದ್ದೇ ಈ ಗೋಪಾಲಕೃಷ್ಣನ  ಸನ್ನಿಧಿಯಲ್ಲಿ. ನನ್ನ ರಾಜಕೀಯ ಆರಂಭವಾಗಿದ್ದೇ ಈ ಗೋಪಾಲಸ್ವಾಮಿ ದೇವಾಲಯದಿಂದಾಗಿದೆ. ಅಂತ್ಯವೂ ಇಲ್ಲಿಯೇ ಆಗಬಹುದೆಂಬ ದೇವರ ನಿರ್ಧಾರವಿದ್ದರೇ ಆ ನಿರ್ಧಾರ ಮುಂದೆ ತಿಳಿಯಲಿದೆ.

 ನನ್ನ ಕ್ಷೇತ್ರದ ಜನರ ಆಶೀರ್ವಾದಿಂದ 4 ಬಾರಿ ವಿಜಯನಗರ ಕ್ಷೇತ್ರದ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರ, ನನ್ನ ಭವಿಷ್ಯದ ಬಗ್ಗೆ  ಸಿಎಂ ಬಳಿ ಹೇಳಿಕೊಂಡಿದ್ದೇನೆ. ನಾನು ಪಕ್ಷಕ್ಕ ಮುಜುಗರ ತರುವ ರೀತಿ ಬಹಿರಂಗವಾಗಿ ಹೇಳಿಕೆ ಕೊಟ್ಟಿಲ್ಲ. ಹೇಳೋದು ಇಲ್ಲ. ಪಕ್ಷಕ್ಕೆ ಮುಜುಗರ ಆಗೋ ರೀತಿ ನಡೆದುಕೊಳ್ಳಲ್ಲ. ಎಲ್ಲೋ ಹೋಗಿ ಬ್ಲಾಕ್ ಮೇಲ್ ತಂತ್ರ ಮಾಡಲ್ಲ. ನನ್ನ ಪಕ್ಷಕ್ಕೆ ಗೌರವ ಕೊಡುವುದು ನನ್ನ ಧರ್ಮ.  ನನ್ನ ರಾಜಕೀಯ 15 ವರ್ಷಗಳದ್ದು. ಗೋಪಾಲಕೃಷ್ಣನ ಪೂಜೆಯನ್ನು ಮುಗಿಸಿದ್ದೇನೆ. ನನ್ನ ಗೋಪಾಲಸ್ವಾಮಿ ನನ್ನನ್ನು ಕೈಬಿಡೋದಿಲ್ಲ ಎಂಬುದಾಗಿ ನಂಬಿದ್ದೇನೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

Key words:   no change – my decisions-Minister -Anand Singh.