ದೇಶದಲ್ಲಿ 7 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ: ಒಂದೇ ದಿನ 22,252 ಮಂದಿಗೆ ಪಾಸಿಟಿವ್ …

ನವದೆಹಲಿ,ಜು,7,2020(www.justkannada.in):  ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 7 ಲಕ್ಷ ಗಡಿ ದಾಟಿದೆ. ಒಂದೇ ದಿನದಲ್ಲಿ 22,252 ಮಂದಿಗೆ ಕೊರೋನಾ ಸೋಂಕು ತಗುಲಿದೆ.

ಕಳೆದ 24 ಗಂಟೆಗಳಲ್ಲಿ 22,252 ಜನರಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ನಿನ್ನೆಒಂದೇ ದಿನ 467 ಜನರು ಕೊರೊನಾ ವೈರಸ್’ಗೆ ಬಲಿಯಾಗಿದ್ದಾರೆ. ಈಮೂಲಕ ಈವರೆಗೆ ದೇಶದಲ್ಲಿ ಕೊರೋನಾಗೆ ಸಾವನ್ನಪ್ಪಿದವರ ಸಂಖ್ಯೆ 20,160ಕ್ಕೆ ಏರಿಕೆಯಾಗಿದೆ.Corona - crossing 7 lakh -borders - country

ಸದ್ಯ 7,19,665 ಮಂದಿ ಸೋಂಕಿತರ ಪೈಕಿ 4,39,948 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 2,59,557 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದು ಬಂದಿದೆ.

Key words: Corona – crossing 7 lakh -borders – country