ತೆಲುಗಿಗೆ ಎಂಟ್ರಿ ಕೊಟ್ಟ ಟಗರು ಪುಟ್ಟಿ ಮಾನ್ವಿತಾ

ಬೆಂಗಳೂರು, ಮಾರ್ಚ್ 20, 2021 (www.justkannada.in): 

ಮತ್ತೋರ್ವ ಕನ್ನಡದ ನಟಿ ತೆಲುಗು ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ.

ಹೌದು. ರಶ್ಮಿಕಾ ಮಂದಣ್ಣ, ನಬಾ ನಟೇಶ್, ರಚಿತಾ ರಾಮ್, ಶ್ರೀಲೀಲಾ, ಕೃತಿ ಶೆಟ್ಟಿ, ನೇಹಾ ಶೆಟ್ಟಿ ಬಳಿಕ ಮಾನ್ವಿತಾ ಕಾಮತ್ ತೆಲುಗು ಸಿನಿಮಾರಂಗ ಪ್ರವೇಶಿಸಿದ್ದಾರೆ.

ಅಂದಹಾಗೆ ಮಾನ್ವಿತಾ ತೆಲುಗಿನ ಚೊಚ್ಚಲ ಸಿನಿಮಾಗೆ ಸಹಿ ಮಾಡಿದ್ದು, ಈಗಾಗಲೇ ಹೊಸ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.

ಈ ವಿಷಯವನ್ನು ಸ್ವತಃ ಮಾನ್ವಿತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಚಿತ್ರದ ಮುಹೂರ್ತದ ಫೋಟೋವನ್ನು ಹಂಚಿಕೊಂಡು ಮಾನ್ವಿತಾ ಸಂತಸ ಪಟ್ಟಿದ್ದಾರೆ.