ಕ್ರಿಕೆಟ್ ಬದುಕಿನ 15 ವರ್ಷ ಪೂರೈಸಿದ ಕೂಲ್ ಕ್ಯಾಪ್ಟನ್

ಬೆಂಗಳೂರು, ಡಿಸೆಂಬರ್ 2, 2019 (www.justkannada.in): ಧೋನಿ ಟೀಮ್ ಇಂಡಿಯಾ ಕ್ರಿಕೆಟ್​ ತಂಡಕ್ಕೆ ಎಂಟ್ರಿಕೊಟ್ಟ ಹೆಗ್ಗಳಿಕೆ ಇಂದಿಗೆ 15 ವರ್ಷ ಪೂರೈಸಿದ್ದಾರೆ.

ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಧೋನಿ, 2004 ಡಿಸೆಂಬರ್ 23ರಂದು ಅಂತಾರಾಷ್ಟ್ರೀಯ ಕ್ರಿಕೆಟ್​​​​ಗೆ ಪಾದಾರ್ಪಣೆ ಮಾಡಿದ್ದರು.

2019 ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಕ್ರಿಕೆಟ್ ರಂಗದಿಂದ ದೂರವುಳಿದಿದ್ದಾರೆ. ಅಲ್ಲದೆ ಮಗದೊಂದು ಬಾರಿ ಬ್ಲೂ ಜೆರ್ಸಿ ಧರಿಸುವರೇ ಅಥವಾ ಕ್ರಿಕೆಟ್‌ಗೆ ವಿದಾಯ ಹಾಡುವರೇ ಎಂಬುದು ಊಹಪೋಹಾಗಳಿಗೆ ಕಾರಣವಾಗಿದೆ.