Wednesday, September 30, 2026

BDA Apartments

ಪುಷ್ಪಾರ್ಚನೆ ಮೂಲಕ ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ...
Home Front Page ಲಂಕಾ ವಿರುದ್ಧ ಸರಣಿಗೆ ‘ಹಿಟ್ ಮ್ಯಾನ್’ಗೆ ವಿಶ್ರಾಂತಿ

ಲಂಕಾ ವಿರುದ್ಧ ಸರಣಿಗೆ ‘ಹಿಟ್ ಮ್ಯಾನ್’ಗೆ ವಿಶ್ರಾಂತಿ

ನವದೆಹಲಿ, ಡಿಸೆಂಬರ್ 2, 2019 (www.justkannada.in): ರೋಹಿತ್‌ ಶರ್ಮಾ ಅವರಿಗೆ ಶ್ರೀಲಂಕಾ ವಿರುದ್ಧ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಅವರಿಗೂ ವಿರಾಮ ನೀಡಲಾಗಿದೆ.

ಬೆನ್ನು ನೋವಿನಿಂದ ಚೇತರಿಸಿಕೊಂಡಿರುವ ಜಸ್‌ಪ್ರೀತ್ ಬೂಮ್ರಾ ಅವರು ಮುಂದಿನ ತಿಂಗಳು ಶ್ರೀಲಂಕಾ (ಟಿ-20) ಮತ್ತು ಆಸ್ಟ್ರೇಲಿಯಾ (ಏಕದಿನ ಸರಣಿ) ವಿರುದ್ಧ ನಡೆಯಲಿರುವ ಸೀಮಿತ ಓವರುಗಳ ಸರಣಿಗೆ ಭಾರತ ತಂಡದ ವೇಗದ ದಾಳಿಯ ನೇತೃತ್ವ ವಹಿಸಲಿದ್ದಾರೆ.

ಬೂಮ್ರಾ ಅವರಿಗೆ ಭಾರತ ತಂಡದ ಫಿಸಿಯೊ ನಿತಿನ್‌ ಪಟೇಲ್‌ ಅವರು ಆಡಲು ಹಸಿರು ನಿಶಾನೆ ತೋರಿದ್ದು, ಅವರು ಸೂರತ್‌ನಲ್ಲಿ ಗುಜರಾತ್ ತಂಡದ ಪರ ರಣಜಿ ಪಂದ್ಯದಲ್ಲಿ ಆಡಲಿದ್ದಾರೆ. ಅನುಭವಿ ಓಪನರ್‌ ಶಿಖರ್‌ ಧವನ್‌ ಸಹ ಎರಡೂ ಸರಣಿಗಳಿಗೆ ಆಯ್ಕೆಯಾಗಿದ್ದಾರೆ.