ಸೇನಾ ಹೆಲಿಕಾಪ್ಟರ್ ದುರಂತ: ಕೊನೆಯ ಕ್ಷಣಗಳ ವಿವರ ಇರುವ ಬ್ಲ್ಯಾಕ್ ಬಾಕ್ಸ್ ಪತ್ತೆ.

ಊಟಿ,ಡಿಸೆಂಬರ್,9,2021(www.justkannada.in):  ನಿನ್ನೆ ತಮಿಳುನಾಡಿನ ಊಟಿ ಬಳಿಯ ಕೂನೂರ್ ಬಳಿ  ಸಂಭವಿಸಿದ  ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಪತ್ನಿ ಸೇರಿ 13 ಮಂದಿ ಮೃತಪಟ್ಟಿದ್ದು ದುರಂತದ ರಹಸ್ಯ ತೆರೆದಿಡಲಿರುವ  ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.ಸೇನಾ ಹೆಲಿಕಾಪ್ಟರ್ ದುರಂತ ಸಂಭವಿಸಿದ ಸ್ಥಳದಲ್ಲಿ 40 ಯೋಧರ ತಂಡ ವಾಯುಸೇನೆ ಹೆಲಿಕಾಪ್ಟರ್ ನಲ್ಲಿದ್ಧ  ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚಿದ್ದಾರೆ. ಇದಕ್ಕಾಗಿ ನಿನ್ನೆಯಿಂದ ಯೋಧರು ಶೋಧ ನಡೆಸುತ್ತಿದ್ದರು.  ಬ್ಲ್ಯಾಕ್ ಬಾಕ್ಸ್ ನಿಂದ ಅಪಘಾತ ಕಾರಣ ಬಹಿರಂಗವಾಗಲಿದೆ ಎಂದು ಹೇಳಲಾಗುತ್ತಿದೆ.

ತಾಂತ್ರಿಕ ತೊಂದರೆಯೋ ಹವಮಾನ ವೈಪರಿತ್ಯವೂ ಪೈಲೆಟ್ ತಪ್ಪು ನಿರ್ಧಾರವೂ ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿದೆ.  ಬ್ಲ್ಯಾಕ್ ಬಾಕ್ಸ್ ನಲ್ಲಿ ಕೊನೆಯ ಕ್ಷಣಗಳ ವಿವರ ಇರಲಿದ್ದು ಇದೀಗ ದುರಂತ ನಡೆದ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.

Key words: Military- helicopter –disaster-Black box- detection – last minute -detail