ಸುಬ್ರಮಣ್ಯ ಷಷ್ಠಿ ಮಹೋತ್ಸವ: ನಾಗ ಪ್ರತಿಮೆಗೆ ಹಾಲು ತುಪ್ಪ ನೈವೇದ್ಯ: ಸುಬ್ರಹ್ಮಣ್ಯನ ದರ್ಶನ ಪಡೆದ ನೂರಾರು ಭಕ್ತರು.

ಮೈಸೂರು,ಡಿಸೆಂಬರ್,9,2021(www.justkannada.in): ಪ್ರಸಿದ್ದ ಸುಬ್ರಹ್ಮಣ್ಯ ಷಷ್ಠಿ ಜಾತ್ರಾ ಮಹೋತ್ಸವ ಹಿನ್ನಲೆ, ದೇಗುಲದೊಳಗೆ ಷಷ್ಠಿ ಹಬ್ಬ ಆಚರಣೆ ಮಾಡುವಂತೆ  ಜಿಲ್ಲಾಡಳಿತದ ಸೂಚನೆ ನೀಡಿದೆ.

ಕೋವಿಡ್ ಮಾರ್ಗಸೂಚಿಯಂತೆ ಜಾತ್ರೆ ಆಚರಣೆ ಸೂಚನೆ ನೀಡಿದ್ದು , ಸರ್ಕಾರದ ಮಾರ್ಗಸೂಚಿ ಪಾಲಿಸಿ ದೇಗುಲದೊಳಗೆ ಪೂಜೆಗೆ ಅನುಮತಿ ನೀಡಲಾಗಿದೆ. ಸಿದ್ಧಲಿಂಗಪುರದ ಸುಬ್ರಹ್ಮಣ್ಯ ದೇವರಿಗೆ ವಿಶೇಷ ,ಅಲಂಕಾರ ಮಾಡಲಾಗಿದ್ದು ದೇವಾಲಯದಲ್ಲಿ  ವಿವಿಧ ಧಾರ್ಮಿಕ ಕೈಂಕರ್ಯ ನೆರವೇರುತ್ತಿದೆ. ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಪ್ರತಿ ವರ್ಷವೂ ಅದ್ದೂರಿಯಾಗಿ ಷಷ್ಠಿ ಜಾತ್ರಾ ಮಹೋತ್ಸವ ನೆರವೇರುತ್ತಿತ್ತು. ಆದರೆ ಕಳೆದ ಮೂರು ವರ್ಷದಿಂದ ಷಷ್ಠಿ ಜಾತ್ರೆಗೆ ಕೊರೋನಾ ಕಾಟ ಎದುರಾಗಿದ್ದು ಈ ಬಾರಿಯು ಸರಳವಾಗಿ ಷಷ್ಠಿ ಜಾತ್ರೆ ನಡೆಯುತ್ತಿದೆ. ಭಕ್ತರು ದೇವಾಲಯದ ಮುಂಭಾಗವೇ ನಮಿಸಿ ತೆರಳುತ್ತಿದ್ದಾರೆ.

ಇನ್ನು ಮೈಸೂರಿನ ಅಮೃತೇಶ್ವರ ದೇವಾಲಯದಲ್ಲಿ ಷಷ್ಠಿ ಸಂಭ್ರಮ ಮನೆ ಮಾಡಿದ್ದು, ನಾಗ ಪ್ರತಿಮೆಗೆ ಭಕ್ತಿಭಾವದಿಂದ ಹಾಲು ತುಪ್ಪ ನೈವೇದ್ಯ, ಮುಂಜಾನೆಯಿಂದಲೇ ವಿವಿಧ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿದೆ.

ದೇವಾಲಯದಲ್ಲಿ ನವಗ್ರಹ ಪೂಜೆ, ಹೋಮ, ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಕೈಂಕರ್ಯ ನೆರವೇರಿದ್ದು, ನೂರಾರು ಭಕ್ತರು ಸುಬ್ರಹ್ಮಣ್ಯನ ದರ್ಶನ ಪಡೆದರು. ಪೂಜೆ ವೇಳೆ ಜನರು ಕೊರೊನಾ ನಿಯಮಗಳ ಮರೆತಿದ್ದು ಕಂಡು ಬಂತು.

Key words: Subramanya -Shashti  mahotsav–mysore-devotees